ವೈದ್ಯರ ಮೇಲೆ ಹಲ್ಲೆ ಖಂಡಿಸಿ ಮುಷ್ಕರ ಹಿನ್ನೆಲೆ: ಟ್ವಿಟ್ಟರ್ ನಲ್ಲಿ ವೈದ್ಯರಿಗೆ ಮನವಿ ಮಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು,ಜೂ,17,2019(www.justkannada.in):  ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶದಾದ್ಯಂತ ವೈದ್ಯರು ಮುಷ್ಕರ ಹೂಡಿದ್ದು, ರಾಜ್ಯಕ್ಕೂ ಮುಷ್ಕರದ ಬಿಸಿ ತಟ್ಟಿದೆ. ಈ ನಡುವೆ ರೋಗಿಗಳಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಲು ವೈದ್ಯರಿಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ವೈದ್ಯರ ಮೇಲಿನ ಹಲ್ಲೆಯನ್ನ ನಾನು ಖಂಡಿಸುತ್ತೇನೆ, ಯಾರ ಮೇಲೆಯೂ ಹಲ್ಲೆ ಮಾಡುವುದು ಒಳ್ಳೆಯದಲ್ಲ.  ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಬೇಕು. ರೋಗಿಗಳಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಬೇಕು ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ದೇಶದಾದ್ಯಂತ ವೈದ್ಯರ ಮುಷ್ಕರಕ್ಕೆ ರಾಜ್ಯದಲ್ಲೂ ಬೆಂಬಲ ನೀಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸೇವೆ ಸ್ಥಗಿತವಾಗಿದೆ. ಆದರೆ ಈಗಾಗಲೇ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ಎಂದಿನಂತೆ ಚಿಕಿತ್ಸೆ ದೊರೆಯುತ್ತಿದೆ.

Key words: doctor’s Strike: CM HD Kumaraswamy appeals to doctors on Twitter

#doctor’sStrike #CMHDKumaraswamy #appeals #doctors #Twitter