ಪ. ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಇಂದು ದೇಶದಾದ್ಯಂತ ವೈದ್ಯರ ಮುಷ್ಕರ: ರೋಗಿಗಳ ಪರದಾಟ

ಬೆಂಗಳೂರು,ಜೂ,17,2019(www.justkannada.in):ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಇಂದು ದೇಶಾದ್ಯಂತ ವೈದ್ಯರ ಮುಷ್ಕರ ನಡೆಸಲು ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದು . ಈ ಹಿನ್ನೆಲೆ ಇಂದು ಬೆಳಗ್ಗೆ 6 ಗಂಟೆಯಿಂದ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.ಈ ಹಿನ್ನೆಲೆ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವೈದ್ಯರ ಮುಷ್ಕರಕ್ಕೆ  ರಾಜ್ಯದ ಖಾಸಗಿ ಆಸ್ಪತ್ರೆ ವೈದ್ಯರು ಸಹ ಬೆಂಬಲ ನೀಡಿದ್ದು, ಈ ಹಿನ್ನೆಲೆ ಎಂ.ಎಸ್ ರಾಮಯ್ಯ ಆಸ್ಪತ್ರೆ, ನಾರಾಯಣ್ ಹೆಲ್ತ್ ಸಿಟಿ, ಪೋರ್ಟಿಸ್, ಸಾಗರ್, ಅಪೋಲೋ ಸೇರಿದಂತೆ ಹಲವು ಆಸ್ಪತ್ರೆಗಳು ಬಂದ್ ಆಗಲಿದೆ.

ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಲಭ್ಯವಿರಲಿದ್ದು, ಇಲ್ಲಿನ ಔಷಧಾಲಯಗಳು ಎಂದಿನಂತೆ ತೆರೆದಿರುತ್ತವೆ, ಹೆರಿಗೆ ಹಾಗೂ ಡಯಾಲಿಸಿಸ್ ಸೇವೆಗೆಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಇನ್ನು ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸೇವೆ ಸ್ಥಗಿತವಾಗಲಿವೆ. ಕ್ಲಿನಿಕ್ ಹಾಗೂ ಲ್ಯಾಬ್ ಗಳು ಸಂಪೂರ್ಣವಾಗಿ ಕ್ಲೋಸ್ ಆಗಿವೆ.

Key words: Assault – Doctors -strike -across – country-today.