ನಮ್ಮ ವ್ಯಾಪ್ತಿಗೆ ಬರಲ್ಲ ಎಂದು  ದೂರು ದಾಖಲಿಸಿಕೊಳ್ಳದಿದ್ರೆ ಕ್ರಮ- ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ….

ಬೆಂಗಳೂರು,ಡಿ,12,2019(www.justkannada.in):  ದೂರು ನೀಡಲು ಬರುವವರಿಗೆ ಇದು ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಹೇಳಿ ಕಳುಹಿಸುವ ಪೊಲೀಸರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್  ಶಾಕ್ ನೀಡಿದ್ದಾರೆ.

ಇದು ನಮ್ಮ ವ್ಯಾಪ್ತಿಗೆ ಬರಲ್ಲವೆಂದು ಹೇಳಿ ದೂರು ದಾಖಲಿಸಿಕೊಳ್ಳದಿದ್ರೆ ಅಂತಹ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ತಮ್ಮ ವ್ಯಾಪ್ತಿಗೆ ಬರಲ್ಲ ಅಂತಾ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ರೆ  ಅಮಾನತು ಮಾಡಲಾಗುತ್ತದೆ. ಯಾರೇ ದೂರು ಕೊಟ್ರೂ ಮೊದಲು ಕೇಸ್ ದಾಖಲಿಸಿಕೊಳ್ಳಿ. ನಂತರ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಸುರಕ್ಷಾ ಆ್ಯಪ್ ನಲ್ಲಿ ಬರುವ ದೂರುಗಳಿಗೆ ತಕ್ಷಣವೇ ಸ್ಪಂದಿಸಿ. ಹೊಯ್ಸಳ ಇಲ್ಲದಿದ್ರೆ ಇನ್ಸ್ ಪೆಕ್ಟರ್ ರನ್ನ ಕಳುಹಿಸಿ ಎಂದು ಭಾಸ್ಕರ್ ರಾವ್ ಪೊಲೀಸರಿಗೆ ತಿಳಿಸಿದ್ದಾರೆ. ನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ಪೊಲೀಸ್ ಇಲಾಖೆ ಸುರಕ್ಷಾ ಆ್ಯಪ್ ಬಳಕೆಗೆ ತಂದಿದೆ.

Key words:  Action -not to- lodge- complaint – Bangalore city -police commissioner -Bhaskar Rao- warns -police