ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ಧವರ ವಿರುದ್ಧ ಕ್ರಮ- ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ನವೆಂಬರ್,24,2021(www.justkannada.in): ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ಧವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಅನುಮಾನ ಬಂದ್ರೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ಮಾಡುತ್ತದೆ.  ಇದು ಸಾಮಾನ್ಯವಾದ ಪ್ರಕ್ರಿಯೆ.  ಭ್ರಷ್ಟಾಚಾರ ಆಡಳಿತ ನೀಡಲು ನಮ್ಮ ಸರ್ಕಾರ ಬದ್ಧ. ಈ ನಿಟ್ಟಿನಲ್ಲಿ ಎಸಿಬಿ ದಾಳಿ ನಡೆಸಿದೆ.  ಎಸಿಬಿ ದೂರುಗಳು ಕೋರ್ಟ್ ಮೆಟ್ಟಿಲೇರುತ್ತಿವೆ. ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ಧವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಟ್ ಕಾಯಿನ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅರಗ ಜ್ಞಾನೇಂದ್ರ, ಬಿಟ್ ಕಾಯಿನ್ ಗಿಂತ ಹ್ಯಾಕಿಂಗ್   ಗಂಭೀರವಾದದ್ದು. ಕಾಂಗ್ರೆಸ್ ಬಳಿ ಏನಾದರೂ ದಾಖಲೆಗಳಿದ್ದರೇ ನೀಡಲಿ. ದಂಧೆಯಲ್ಲಿ ಅವರ ಮಕ್ಕಳು ಬಿಜೆಪಿಯವರ ಮಕ್ಕಳಿದ್ದರೂ  ದಾಖಲೆ ನೀಡಲಿ ಎಂದು ಹೇಳಿದರು.

Key words: Action- against – caught – ACB –attacks-Home Minister -Araga Jnanendra.