ಇಬ್ಬರು ನಾಯಕರಿಗೆ ಟಾಂಗ್ ಕೊಟ್ಟ ಶಾಸಕ ಜಿ.ಟಿ ದೇವೇಗೌಡ: ಕಾಂಗ್ರೆಸ್ ಸೇರ್ಪಡೆ ಬಗ್ಗೆ ಏನಂದ್ರು ಗೊತ್ತೆ…?

ಮೈಸೂರು,ಜುಲೈ,3,2021(www.justkannada.in): ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಹೆಚ್‌ಡಿ.ಕುಮಾರಸ್ವಾಮಿ ನಡುವಿನ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ನಾಯಕರಿಗೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ಟಾಂಗ್ ನೀಡಿದ್ದಾರೆ.jk

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ‌ ಜೆಡಿಎಸ್ ಶಾಸಕ ಜಿಟಿ.ದೇವೇಗೌಡ, ಚುನಾವಣೆ ಇನ್ನೂ 23 ತಿಂಗಳು ಇದೆ. ಈಗಲೇ ಮುಂದೆ ಹಿಂದೆ ಎನ್ನುವ ಚರ್ಚೆ ಬೇಡ. ಯಾರು ಮುಂದೆ ಹೋಗಬೇಕು ಎಂಬುದನ್ನು ಮತದಾರ ತೀರ್ಮಾನ ಮಾಡುತ್ತಾನೆ ಎಂದು ಹೆಚ್.ಡಿ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.

ಹಿಂದೆ ಹುಣಸೂರಿನಲ್ಲಿ ಜನರ ಮಾತು ಕೇಳದೆ ತಪ್ಪು ಮಾಡಿದ್ದೇನೆ: ಆಂತಹ ತಪ್ಪು ಮತ್ತೆ ಮಾಡಲ್ಲ.

ತಾವು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಜಿ.ಟಿ ದೇವೇಗೌಡ, ಜನರನ್ನು ಕೇಳಿ ನಾನು ತೀರ್ಮಾನ ಮಾಡುತ್ತೇನೆ. ಹಿಂದೆ ಹುಣಸೂರಿನಲ್ಲಿ ಜನರ ಮಾತು ಕೇಳದೆ ತಪ್ಪು ಮಾಡಿದ್ದೇನೆ. ಮತದಾರ ಮಾತು ಕೇಳದೆ ಬಿಜೆಪಿ ಸೇರಿ ಸೋತಿದ್ದೆ. ಆಂತಹ ತಪ್ಪು ಮತ್ತೆ ಮಾಡಲ್ಲ. ಶೀಘ್ರದಲ್ಲೇ ಗ್ರಾಮೀಣ ಭಾಗದ ಪ್ರವಾಸ ಮಾಡುತ್ತೇನೆ. ಪ್ರತಿಯೊಬ್ಬ ಮತದಾರನ ಅಭಿಪ್ರಾಯ ಸಂಗ್ರಹ ಮಾಡುವೆ. ನಾನು ಜೆಡಿಎಸ್‌ ನಲ್ಲೇ ಇರಬೇಕಾ.? ಕಾಂಗ್ರೆಸ್‌ ಸೇರಬೇಕಾ‌? ಅಥವಾ ಬಿಜೆಪಿಗೆ ಹೋಗಬೇಕಾ.? ಇದೆಲ್ಲವನ್ನು ಈ ಬಾರಿ ಜನರು ತೀರ್ಮಾನ ಮಾಡುತ್ತಾರೆ. ಸದ್ಯ ಕೊರೋನಾ ಕಡಿಮೆ ಆದ ನಂತರ ಕ್ಷೇತ್ರ ಪ್ರವಾಸ ಮಾಡುವೆ. ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹ ಮಾಡಿ ತೀರ್ಮಾನ ಮಾಡುವೆ ಎಂದು ತಿಳಿಸಿದರು.

ಶಾಲೆಯೂ ಉಳಿಯಲಿ, ಸ್ಮಾರಕವೂ ನಿರ್ಮಾಣವಾಗಲಿ..!

ಎನ್.ಟಿ.ಎಂ ಶಾಲೆ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಾಣ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಶಾಲೆಯೂ ಉಳಿಯಲಿ, ಸ್ಮಾರಕವೂ ನಿರ್ಮಾಣವಾಗಲಿ..! ಶಾಲೆಯನ್ನ ಉಳಿಸಿ ಸ್ಮಾರಕ ನಿರ್ಮಾಣ ಮಾಡಲು ಅವಕಾಶ ಇದೆ.ಮೈಸೂರಿನಲ್ಲಿ ಬಹಳಷ್ಟು ಜನ ಸಾಹಿತಿಗಳು, ಬುದ್ದಿ ಜೀವಿಗಳಿದ್ದಾರೆ. ಇಂತಹ ಸ್ಥಳದಲ್ಲಿ ಈ ವಿಚಾರವನ್ನು ದೊಡ್ಡದು ಮಾಡಬಾರದು. ಎಲ್ಲರೂ ಕೂತು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಿ. ಅನಾವಶ್ಯಕವಾಗಿ ಚರ್ಚೆ ಬೇಡ ಎಂದು ಸಲಹೆ ನೀಡಿದರು.

ಜಿ.ಪಂ ಹಾಗೂ ತಾ.ಪಂ ಮೀಸಲಾತಿ ಪ್ರಕಟ ವಿಚಾರ ಸಂಬಂಧ  ಈಗ ಮೀಸಲಾತಿ ಪ್ರಕಟವಾಗಿದೆ. ಮೀಸಲಾತಿ ಬಗ್ಗೆ ಅಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಅಲ್ಲದೇ ಚುನಾವಣೆ ನಡೆಯಲು ಇನ್ನೂ ಸಮಯ ಇದೆ. ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಬಹುದು. ಕಾದು ನೋಡೊಣ ಎಂದು ಶಾಸಕ ಜಿ ಟಿ ದೇವೇಗೌಡ ತಿಳಿಸಿದರು.

Key words: mysore- MLA- GT Deve Gowda -Tong -two leaders -Joining -Congress