ಪ್ರೀತಿ ನಿರಾಕರಿಸಿದ್ಧ ಯುವತಿಗೆ ಆ್ಯಸಿಡ್ ಎರಚಿದ್ಧ ಆರೋಪಿ ಕೊನೆಗೂ ಅರೆಸ್ಟ್.

Promotion

ಬೆಂಗಳೂರು,ಮೇ,13,2022(www.justkannada.in):  ಪ್ರೀತಿ ನಿರಾಕರಿಸಿದ ಯುವತಿಗೆ ಆ್ಯಸಿಡ್ ದಾಳಿ ನಡೆಸಿ ಕಳೆದ 16 ದಿನಗಳಿಂದಲೂ ತಲೆಮರಿಸಿಕೊಂಡಿದ ಆರೋಪಿ ನಾಗೇಶ್ ನನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪ್ರೀತಿ ನಿರಾಕರಿಸಿದ ಯುವತಿಗೆ ಆರೋಪಿ ನಾಗೇಶ್ ಏಪ್ರಿಲ್ 28ರಂದು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ನಂತರ ಯುವತಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ನಡುವೆ ಅಂದಿನಿಂದ  ಪೊಲೀಸರು ಆರೋಪಿ ನಾಗೇಶ್ ನನ್ನ ಹೆಡೆಮುರಿ ಕಟ್ಟಲು ಬಲೆ ಬೀಸಿದ್ದರು.

ಈ ಮಧ್ಯೆ ಆರೋಪಿ ನಾಗೇಶ್ ತಮಿಳುನಾಡಿನ ತಿರುವಣ್ಣಮಲೈನಲ್ಲಿ ತಲೆಮರಿಸಿಕೊಂಡಿದ್ದ. ಇದೀಗ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಆರೋಪಿ ನಾಗೇಶ್ ನನ್ನು ಬಂಧಿಸಿದ್ದಾರೆ.

Key words: acid-attack- Nagesh-arrested