ಬಿಬಿಎಂಪಿ ಚುನಾವಣೆ ನಾಳೆ ನಡೆದರೂ ಎದುರಿಸಲು ಸಿದ್ಧ- ಸಚಿವ ಮುನಿರತ್ನ.

ಬೆಂಗಳೂರು,ಮೇ,13,2022(www.justkannada.in):  ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು ಎರಡು ವಾರದಲ್ಲಿ ಬಿಬಿಎಂಪಿಗೆ ಚುನಾವಣೆ ಘೋಷಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ನಾಳೆ ನಡೆದರೂ ಎದುರಿಸಲು ಸಿದ್ಧ ಎಂದು ತೋಟಗಾರಿಕೆ  ಸಚಿವ ಮುನಿರತ್ನ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಮುನಿರತ್ನ, ಬಿಬಿಎಂಪಿ ಚುನಾವಣೆ ನಾಳೆ ನಡೆಸಿದರೂ ಸಿದ‍್ಧ. ಆದ್ರೆ ವಾರ್ಡ್ ಸಂಖ್ಯೆ 243 ಮಾಡಬೇಕು. ಬಿಜೆಪಿ ರಾಜ್ಯಾಧ್ಯಕ್ಷ  ಕಟೀನ್ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಅಂತರಿಕ ಕಲಹ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ಕಾಂಗ್ರೆಸ್ ಗೊಂದಲದ ವಿಚಾರ ನಮಗೆ ಬೇಡ. ನಮಗ್ಯಾಗೆ ಕಾಂಗ್ರೆಸ್ ನವರ ವಿಚಾರ. ರಮ್ಯಾ ಒಳ್ಳೆಯ ನಟಿ, ರಮ್ಯಾ ಮೇಲೆ ಒಳ್ಳೆಯ ಗೌರವವಿದೆ ಎಂದು ಹೇಳಿದರು.

Key words: Ready – face – BBMP –election- Minister Muniratna.