ಪೊಲೀಸ್ ಅಧಿಕಾರಿಗೆ ಜಾತಿ ಹೆಸರಲ್ಲಿ ನಿಂದನೆ ಆರೋಪ: ಮಾಜಿ ಶಾಸಕ ಸುರೇಶ್ ಗೌಡ ವಿರುದ್ದ ಪ್ರತಿಭಟನೆ..

Promotion

ತುಮಕೂರು,ಜೂ,21,2019(www.justkannada.in): ಪೋಲಿಸ್ ಅಧಿಕಾರಿ ಮೇಲೆ ಜಾತಿ ಹೆಸರಿನಲ್ಲಿ ಸುರೇಶ್ ಗೌಡ ಅವಹೇಳನಕಾರಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಸುರೇಶ್ ಗೌಡ ವಿರುದ್ದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಪ್ರತಿಭಟನೆ ನಡೆಯಿತು.

ನಗರದ ಟೌನ್ ಹಾಲ್ ಬಳಿ ಆಗಮಿಸಿದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಕಾರ್ಯಕರ್ತರು  ತುಮಕೂರು ಗ್ರಾಮಂತರ ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಪ್ರತಿಭಟನೆನಡೆಸಿದರು.  ಪೋಲಿಸ್ ಅಧಿಕಾರಿ ಮೇಲೆ ಜಾತಿ ಹೆಸರಿನಲ್ಲಿ ಸುರೇಶ್ ಗೌಡ ಅವಹೇಳನ ಕಾರಿ ನಿಂದನೆ ಮಾಡಿದ್ದಾರೆ. ಜಾತಿ ಹೆಸರಲ್ಲಿ ಈ ರೀತಿ ಅವಹೇಳನ ಮಾಡುವುದು ಸರಿಯಲ್ಲ… ಈ ಕೂಡಲೇ ಸರ್ಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಅಧಿಕಾರಿಯ ಮೇಲೆ ನಿಂದನೆ ಮಾಡಿರುವುದು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ. ಸಂವಿಧಾನದ ಅಡಿಯಲ್ಲಿ ಆತನ ವಿರುದ್ಧ ಶಿಸ್ತುಕ್ರಮ‌ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Key words: accused – abuse – caste name-Protest –against- former MLA -Suresh Gowda