Saturday, September 12, 2026

BDA Apartments

ಮೈಸೂರಿನಲ್ಲಿ ಅಪಘಾತ: ಯುವತಿ ಸಾವು BDA JK_Adv BDA Adv
Home Crime ಮೈಸೂರಿನಲ್ಲಿ ಅಪಘಾತ: ಯುವತಿ ಸಾವು

ಮೈಸೂರಿನಲ್ಲಿ ಅಪಘಾತ: ಯುವತಿ ಸಾವು

ಮೈಸೂರು,ಮೇ,6,2022(www.justkannada.in): ಎರಡು ಸ್ಕೂಟರ್ ಗಳ ನಡುವೆ  ಸಂಭವಿಸಿದ ಅಪಘಾತದಲ್ಲಿ ಯುವತಿ ಮೃತಪಟ್ಟಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿ  ಇಂದು ಬೆಳಗ್ಗೆ ನಡೆದಿದೆ.

ಪೊಲೀಸ್ ಬಡಾವಣೆ ಮೂರನೇ ಹಂತದ ನಿವಾಸಿ , ಬಿಎಸ್ ಎನ್ ಎಲ್ ನಿವೃತ್ತ ಉದ್ಯೋಗಿ ಲಕ್ಷ್ಮೀಪತಿ ಎಂಬವರ ಮಗಳು ಲತಾ (24)  ಮೃತಪಟ್ಟವರು. ಖಾಸಗಿ ಕಂಪನಿಯೊಂದರಲ್ಲಿ ಆರ್ಕಿಟೆಕ್ಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಕೆಲಸಕ್ಕೆ ಹೋಗುತ್ತಿದ್ದ ವೇಳೆ ರಿಂಗ್ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಬಂಡಿಪಾಳ್ಯ ಕಡೆಯಿಂದ ವೇಗವಾಗಿ ಬಂದ ಸ್ಕೂಟರ್ ವೊಂದು ಡಿಕ್ಕಿ ಹೊಡೆದಿದೆ.ಮೈಸೂರಿನಲ್ಲಿ ಅಪಘಾತ death death 1

ಇದರಿಂದ ಕೆಳಕ್ಕೆ ಬಿದ್ದ ಲತಾ ಅವರ ತಲೆಯ ಭಾಗಕ್ಕೆ ತೀವ್ರತರವಾದ ಪೆಟ್ಟಾಗಿದೆ. ಈ ವೇಳೆ ಸಾರ್ವಜನಿಕರು ತಕ್ಷಣ ಸಮೀಪದ ನಿರ್ಮಲಾ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರ ವೇಳೆಗೆ ಪ್ರಾಣ ಹೋಗಿದೆ.  ಪ್ರಕರಣ ಸಂಬಂಧ ಸಿದ್ದಾರ್ಥನಗರ ಸಂಚಾರಿ ಪೊಲೀಸ್ ಠಾಣೆ ಇನ್ಸ್‌ ಪೆಕ್ಟರ್ ನಟರಾಜ್ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Key words: Accident – Mysore- Death -young woman