ಚೀನಾದ 80% ಜನತೆಗೆ ಕೋವಿಡ್ ಸೋಂಕು: ನಿಯಂತ್ರಣಕ್ಕೆ ಸರ್ಕಾರದ ಹರಸಾಹಸ

ಬೆಂಗಳೂರು, ಜನವರಿ 22, 2022 (www.justkannada.in): ಚೀನಾದಲ್ಲಿ ಮುಂದಿನ ಎರಡು ಅಥವಾ ಮೂರು ತಿಂಗಳು ಕೋವಿಡ್-‌19 ಸೋಂಕಿನ ಹಾವಳಿ ಏರುಗತಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

ಚೀನಾದಲ್ಲಿ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಯೂ ಇದೆ. ಈಗಾಗಲೇ ದೇಶದ 80% ಜನತೆಗೆ ಸೋಂಕು ತಗುಲಿದೆ ಎಂದು ಚೀನಾ ತಿಳಿಸಿದೆ.

ಎರಡನೇ ಅಲೆ ಹರಡುವ ನಿರೀಕ್ಷೆ ಇಲ್ಲ ಎಂದು ಚೀನಾ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆಂಡ್ ಪ್ರಿವೆನ್ಷನ್‌ನ ಮುಖ್ಯ ವಿಜ್ಞಾನಿ ವೂ ಜುನಾವೊ ತಿಳಿಸಿದ್ದಾರೆ.

ಜನವರಿ 12-13ರ ಅವಧಿಯಲ್ಲಿ ಚೀನಾದಲ್ಲಿ 12,658 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಹರಸಾಹಸಪಡುತ್ತಿದೆ.