ಅಂಬರ್ ‍ಗ್ರೀಸ್ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ್ದ 6 ಮಂದಿ ಬಂಧನ.

Promotion

ಮಂಗಳೂರು,ಫೆಬ್ರವರಿ,8,2022(www.justkannada.in): ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ 3.48 ಕೊಟಿ ಮೌಲ್ಯದ 3ಕೆಜಿ 480  ಅಂಬರ್ ‍ಗ್ರೀಸ್ ಪತ್ತೆ ಹಚ್ಚಿದ ಮಂಗಳೂರು ನಗರ ಪೊಲೀಸರು ಈ ಸಂಬಂಧ 6 ಮಂದಿಯನ್ನ ಬಂಧಿಸಿದ್ದಾರೆ.

ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲ್ಲೂಕು ಬಾಳೆಪುಣಿ ಗ್ರಾಮದ ನವೋದಯ ಶಾಲೆ ಬಳಿ ಅಕ್ರಮವಾಗಿ ಅಂಬರ್ ಗ್ರೀಸ್ ಮಾರಾಟ ಮಾಡಲು ಯತ್ನಿಸಿದ  ಬೆಂಗಳೂರು ಮತ್ತು ಉಡುಪಿ ಮೂಲದವರು ಸೇರಿ 6 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್, ಸತ್ಯರಾಜ್,ರೋಹಿತ್, ರಾಜೇಶ್, ವಿರೂಪಾಕ್ಷ, ನಾಗರಾಜ್ ಬಂಧಿತ ಆರೋಪಿಗಳು. ಸಹಾಯಕ ಪೊಲೀಸ್ ಆಯುಕ್ತ ದಿನಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ  ಕೊಣಾಜೆ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಮುಂದಾಳತ್ವದಲ್ಲಿ  ಪಿಎಸ್ ಐ ಶರಣಪ್ಪ  ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Key words: 6 arrested – attempting – sell amber grease- illegally