ಐಕೆಎಸ್ ಸುಧಾರಣೆಗೆ ಸಮಿತಿ ರಚನೆ

ಮೈಸೂರು,ಫೆಬ್ರವರಿ,8,2022(www.justkannada.in) ಭಾರತೀಯ ಜ್ಞಾನ ವ್ಯವಸ್ಥೆಯನ್ನು ಸುಧಾರಿಸಿ ಸರಿದೂಗಿಸಲು ಹಾಗೂ ಮಾರ್ಗಸೂಚಿಯನ್ನು ತಯಾರಿಸಲು ದೆಹಲಿಯ ಯುಜಿಸಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP), 2020 ಉನ್ನತ ಶಿಕ್ಷಣ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸುತ್ತದೆ. ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಉತ್ತೇಜಿಸುವುದು ಆಡಳಿತ ಮತ್ತು ಸಾರ್ವಜನಿಕರಲ್ಲಿ ಭಾರತದ ಶ್ರೀಮಂತ ಮತ್ತು ಪ್ರಾಚೀನ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ಯುಜಿಸಿ ಪ್ರಕಟಣೆ ತಿಳಿಸಿದೆ.Mysore university-VC- Prof.G Hemanth Kumar-. Jagajyothi Award

ಯಾರಿದ್ದಾರೆ ಸಮಿತಿಯಲ್ಲಿ?
ಸಮಿತಿ ಅಧ್ಯಕ್ಷರಾಗಿ ಮದ್ರಾಸ್ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಎಂ.ಡಿ.ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ. ಸದಸ್ಯರಾಗಿ ಗೌಹಾಟಿ ಐಐಟಿ ನಿರ್ದೇಶಕ ಪ್ರೊ.ಟಿ.ಜಿ.ಸೀತಾರಾಮ್, ಬಾಂಬೆ ಐಐಟಿಯ ಪ್ರೊ.ಕೆ.ರಾಮ ಸುಬ್ರಮಣಿಯನ್, ಭಾರತೀಯ ಜ್ಞಾನ ವ್ಯವಸ್ಥೆ ರಾಷ್ಟ್ರೀಯ ಸಂಚಾಲಕ ಪ್ರೊ.ಜಿ.ಸೂರ್ಯನಾರಾಯಣ ಮೂರ್ತಿ, ಗುಜರಾತ್ ಕೇಂದ್ರೀಯ ವಿವಿಯ ಕುಲಪತಿ ಪ್ರೊ. ಟಿ. ವಿ.ಕಟ್ಟೀಮನಿ, ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ಹಿಂದಿ ವಿವಿಯ ಕುಲಪತಿ ಪ್ರೊ. ರಜನೀಶ್ ಕುಮಾರ್ ಶುಕ್ಲಾ, ಮೈವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್, ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಪ್ರೊ. ಶ್ರೀನಿವಾಸ್ ವರಖೆಡಿ, ಬೆಂಗಳೂರು ಜೈನ್ ವಿವಿ ನಿವೃತ ಪ್ರಾಧ್ಯಾಪಕ ಪ್ರೊ. ಆರ್. ಎನ್. ಅಯ್ಯಂಗಾರ್, ಯುಜಿಸಿ ಜಂಟಿ ಕಾರ್ಯದರ್ಶಿ ಡಾ.ಜಿತೇಂದ್ರ ಕುಮಾರ್ ತೃಪ್ತಿ ನೇಮಕಗೊಂಡಿದ್ದಾರೆ.

key words:Committee -formation – IKS- reform