ಕನ್ನಡಪರ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಎಂ.ಬಿ.ವಿಶ್ವನಾಥ್ ನಿಧನ.

ಮೈಸೂರು,ಮೇ,26,2021(www.justkannada.in): ಹಿರಿಯ ನಾಗರೀಕ ಕನ್ನಡ ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಎಂ.ಬಿ.ವಿಶ್ವನಾಥ್( 80) ರವರು  ಇಂದು ಮಧ್ಯಾಹ್ನ 12:30 ರಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.jk

ವಿಶ್ವನಾಥ್ ರವರ ಪುತ್ರಿ ಉಪನ್ಯಾಸಕಿ ಲಕ್ಷ್ಮಿ , ಕುಟುಂಬದ ಬಂಧು ಹಾಗೂ ಸ್ನೇಹಿತರನ್ನ ಅಗಲಿದ್ದಾರೆ. ವಿಶ್ವನಾಥ್ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಗೂ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಮೈಸೂರಿನ ರಾಮಕೃಷ್ಣ ‌ನಗರದಲ್ಲಿರುವ ಕನ್ನಡ ವಿಕಾಸ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆ ಧರ್ಮದರ್ಶಿ ಹಾಗೂ ಮೈಸೂರಿನ ಎಂ ಡಿ ಸಿ ಸಿ ಬ್ಯಾಂಕ್ ನಲ್ಲಿ ಸೂಪಡೆಂಟ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ನಿವೃತ್ತಿ ನಂತರ ಜನಾನುರಾಗಿಯಾಗಿದ್ದ ಅವರು ಕನ್ನಡ ಭಾಷೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಬಿ ಎಸ್ ಇ ಪದವಿಯನ್ನ ಕನ್ನಡದಲ್ಲಿ ಮಾಡಿದ್ದರು. ವಿಶ್ವನಾಥ್ ಅವರ ನಿಧನಕ್ಕೆ ಹಿರಿಯ ಪತ್ರಕರ್ತರಾದ ಕೆ.ವಿ.ಶ್ರೀನಿವಾಸನ್ ( ಬ್ರದರ್) ಸಂತಾಪ ಸೂಚಿಸಿದ್ದಾರೆ.

Key words: Kannada worker – social activist -MB Vishwanath- passes away-mysore