4ನೇ ಶನಿವಾರ ರಜೆ: ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ ರಾಜ್ಯ ಸರ್ಕಾರ…

ಬೆಂಗಳೂರು,ಜೂ,12,2019(www.justkannada.in): ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ನಾಲ್ಕನೇ  ಶನಿವಾರವೂ ಸರ್ಕಾರಿ ರಜೆ ನೀಡಲು ಒಪ್ಪಿಗೆ ನೀಡಿದ್ದ ರಾಜ್ಯ ಸರ್ಕಾರ  ಇದೀಗ ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.

ಇನ್ಮುಂದೆ ನಾಲ್ಕನೇ ಶನಿವಾರ ಸರ್ಕಾರಿ ರಜೆ ದಿನವಾಗಿದೆ. ಇನ್ನು ಆದರೆ ಸರ್ಕಾರಿ ನೌಕರರಿಗೆ ನೀಡಿದ್ದ ವರ್ಷಕ್ಕೆ 15 ದಿನಗಳ ಸಾಂದರ್ಭಿಕ ರಜೆ(ಸಿಎಲ್) 10 ದಿನಗಳಿಗೆ ಇಳಿಸಲಾಗಿದೆ.  ಬಸವ ಮತ್ತು ಕನಕ ಮತ್ತು ವಾಲ್ಮಿಕಿ ಜಯಂತಿಗಳ ರಜೆ ಕಡಿತಗೊಳಿಸಲು ಮನವಿ ಸಲ್ಲಿಸಲಾಗಿತ್ತು.

ಈ ಸಂಬಂಧ ಕಳೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸರ್ಕಾರಿ ನೌಕರರಿಗೆ 4ನೇ ಶನಿವಾರ ರಜೆ ನೀಡುವುದು ಮತ್ತು ಸರ್ಕಾರಿ ನೌಕರರಿಗೆ ನೀಡಿದ್ದ ವರ್ಷಕ್ಕೆ 15 ದಿನಗಳ ಸಾಂದರ್ಭಿಕ ರಜೆ(ಸಿಎಲ್) 10 ದಿನಗಳಿಗೆ ಇಳಿಸುವುದಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು. ಹಾಗೆಯೇ ಕನಕ, ಬಸವ ಹಾಗೂ ವಾಲ್ಮೀಕಿ ಜಯಂತಿ ಸೇರಿದಂತೆ ಕೆಲ ಜಯಂತಿಗಳ ರಜೆ ಕಡಿತಗೊಳಿಸುವ  ಬಗ್ಗೆ ನಿರ್ಧಾರವಾಗಲಿಲ್ಲ.

ಇನ್ನು ಇದೀಗ ರಾಜ್ಯ ಸರ್ಕಾರಿ ನೌಕರರಿಗೆ 4ನೇ ಶನಿವಾರ ರಜೆ ನೀಡುವ ಕುರಿತು ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.

Key words: 4th Saturday leave- State Government issued by Gazette Notification.

#4thSaturday #leave #StateGovernment #issued #GazetteNotification.