ವರ್ಗಾವಣೆಯಾದ ಪಿಎಸ್ ಐ ಯಾಸ್ಮಿನ್ ತಾಜ್ ಅವರಿಗೆ ಗ್ರಾಮದ ಮುಖಂಡರಿಂದ ಬೀಳ್ಕೊಡುಗೆ..

ಮೈಸೂರು,ಜೂ,12,2019(www.justkannada.in): ಟಿ.ನರಸೀಪುರ ಪೊಲೀಸ್ ಠಾಣೆಯಿಂದ ಬೇರೆಡೆಗೆ ವರ್ಗಾವಣೆಯಾದ ಪಿಎಸ್ಐ ಯಾಸ್ಮಿನ್ ತಾಜ್  ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಬೀಳ್ಕೊಡುಗೆ ಕೊಟ್ಟರು.

ಟಿ. ನರಸೀಪುರ ತಾಲ್ಲೂಕಿನ ಆಲಗೂಡು ಗ್ರಾಮದ ಮುಖಂಡರು ಪಿಎಸ್ ಐ ಯಾಸ್ಮೀನ್ ತಾಜ್ ಅವರಿಗೆ ಅಭಿನಂದಿಸಿ ಬೀಳ್ಕೊಡುಗೆ ಕೊಟ್ಟರು. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಅಭಿನಂದನಾ ಕಾರ್ಯಕ್ರಮ ಕಾರ್ಯಕ್ರಮ ನಡೆಯಿತು. ಇರುವಷ್ಟು ದಿನ ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಸಬ್ ಇನ್ಸ್ ಪೆಕ್ಟರ್ ಯಾಸ್ಮಿನ್ ತಾಜ್ ರವರಿಗೆ ಮುಂದಿನ ವೃತ್ತಿ ಜೀವನಕ್ಕೆ ಶುಭವಾಗಲಿ ಎಂದು ಗ್ರಾಮದ ಮುಖಂಡರು ಹಾರೈಸಿದರು.

ಇದೇ ಸಂದರ್ಭದಲ್ಲಿ ಮುಖಂಡರೊಂದಿಗೆ ಮಾತನಾಡಿದ ಯಾಸ್ಮಿನ್ ತಾಜ್,  ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಕೆಲವರಿಗೆ ನೋವು ಉಂಟಾಗುತ್ತದೆ. ಕೆಲವರಿಗೆ ಸಮಾಧಾನ ಪಡಿಸಬೇಕಾಗುತ್ತದೆ. ಇದ್ಯಾವುದನ್ನು ನಾನು ವೈಯಕ್ತಿಕ ಕಾರಣಗಳಿಂದ ಮಾಡಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಲು ಸಹಕರಿಸಿದ ಟಿ.ನರಸೀಪುರ ಜನತೆಗೆ ಕೃತಜ್ಞತೆ ಸಲ್ಲಿಸಿದರು.

.ಈ ಸಂದರ್ಭ ಮುಖಂಡರುಗಳಾದ ಆಲಗೂಡು ಮಂಜು,ಲಕ್ಷ್ಮಿಕಾಂತ್,ಸಿದ್ಧಪ್ಪ,ಸಂತೋಷ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Key words:T Narasipura-PSI -Yasmin Taj –Congratulation- Ceremony-mysore