ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ನೀಡಿ ವಿವಿಧ ಹಂತದ ಕಾಮಗಾರಿ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ..

ಮೈಸೂರು,ಜೂ,12,2019(www.justkannada.in):  ಮೈಸೂರಿನ ಅಖಿಲಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ವಿವಿಧ ಹಂತದ ಕಾಮಗಾರಿ ಪರಿಶೀಲನೆ ನಡೆಸಿದರು.

ವಾಕ್ ಶ್ರಾವಣ ಸಂಸ್ಥೆಗೆ  ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ  ಎಲ್.ನಾಗೇಂದ್ರ  ಭೇಟಿ ನೀಡಿ ಕೇಂದ್ರ ಸರ್ಕಾರದ ಅನುದಾನದಡಿ  ನಡೆಯುತ್ತಿರುವ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿದರು. ಇನ್ನು ಪ್ರಧಾನಿ ಮೋದಿ ಅವರಿಂದ ನೂತನ ಕಟ್ಟಡ ಉದ್ಘಾಟನೆ ಮಾಡಿಸಲು ಸಂಸದ ಪ್ರತಾಪ್ ಸಿಂಹ ಚಿಂತನೆ ನಡೆಸಿದ್ದಾರೆ.

ಕಾಮಗಾರಿ ಪರಿಶೀಲನೆ ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ 5 ವರ್ಷದ ಹಿಂದೆ  ಸೆಂಟರ್ ಆಫ್ ಎಕ್ಸಾಲೆನ್ಸ್ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೆವು ಇದೀಗ ಕಾಮಗಾರಿ ಮುಗಿದಿದ್ದು ಇನ್ನು 3 ತಿಂಗಳಲ್ಲಿ ಉದ್ಘಾಟನೆಯಾಗಲಿದೆ. ವಾಕ್ ಶ್ರಾವಣ ಸಂಸ್ಥೆಗೆ ನೂತನ ಪರಿಕರಗಳನ್ನ ಅಳವಡಿಸಲಾಗುತ್ತೆ, ಈ ಸಂಸ್ಥೆಗೆ ಕಾಯಕಲ್ಪ ನೀಡಲು ಮುಂದಾಗಿದ್ದೇವೆ. ಸದ್ಯ ಎಲ್ಲ ಕೆಲಸಗಳು ಇನ್ನೂ ಮೂರು ತಿಂಗಳ ಒಳಗೆ ಮುಗಿಯಲಿದ್ದು  ಉದ್ಘಾಟನೆಗೆ ಪ್ರಧಾನಿ  ಮೋದಿ ಅವರನ್ನ ಕರೆಯಲಾಗುವುದು ಎಂದರು.

Key words: , MP  Pratap simha-Visit –mysore- AIISH