ಕಲ್ಯಾಣ ಕರ್ನಾಟಕ ಭಾಗದಲ್ಲಿ 2100 ಶಾಲಾ ಕೊಠಡಿ, 2500 ಅಂಗನವಾಡಿ ನಿರ್ಮಾಣಕ್ಕೆ ಕ್ರಮ- ಸಿಎಂ ಬೊಮ್ಮಾಯಿ.

ಕಲ್ಬುರ್ಗಿ,ಸೆಪ್ಟಂಬರ್,17,2022(www.justkannada.in): ಕಲ್ಯಾಣ ಕರ್ನಾಟಕ ಭಾಗದಲ್ಲಿ 2100 ಶಾಲಾ ಕೊಠಡಿ, 2500 ಅಂಗನವಾಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು  ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ಅಂಗವಾಗಿ ಕಲ್ಬುರ್ಗಿಯ ಡಿಆರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೆಕೆ ಆರ್.ಡಿಬಿಗೆ 3 ಸಾವಿರ ಕೋಟಿ ಹಣ ನೀಡಲಾಗಿದೆ . ನಮ್ಮದು ಕ್ರಿಯಾಶೀಲ ಸರ್ಕಾರ ಎಂದು ಬಣ್ಣಿಸಿದರು.

ಬುಡಸಮೇತ ಪ್ರಾದೇಶಿಕ ಅಸಮತೋಲನವನ್ನ ಕಿತ್ತು ಹಾಕುವ ಕೆಲಸ ಮಾಡುತ್ತೇವೆ.  ಕಲ್ಯಾಣ ಕರ್ನಾಟಕ ಭಾಗದಲ್ಲಿ 68 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಲಾಗುತ್ತದೆ. 2500 ಅಂಗನವಾಡಿ  ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ.  ಅಕ್ಟೋಬರ್ 15ರೊಳಗೆ ಎಲ್ಲಾ ಶಾಲೆಗಳ ಶೌಚಾಲಯ ನಿರ್ಮಾಣ, ಕೈಗಾರಿಕ ಅಭಿವೃದ್ಧಿಗೆ  ಕ್ರಮ ಕೈಗೊಳ್ಳುತ್ತೇವೆ ಎಂದರು.

Key words: 2100 school –rooms- 2500 Anganwadi-Kalyan Karnataka-  CM Bommai.