ಲೋಕಸಭೆಯಲ್ಲಿ ಭದ್ರತಾ ವೈಪಲ್ಯ ಪ್ರಕರಣ: ಕೇಂದ್ರಗೃಹ ಸಚಿವ ಅಮಿತ್ ಶಾ ಹೊಣೆ ಹೊರಲಿ- ಬಿ.ಕೆ ಹರಿಪ್ರಸಾದ್

ಬೆಳಗಾವಿ ,ಡಿಸೆಂಬರ್,13,2023(www.justkannada.in): ಲೋಕಸಭೆ ಕಲಾಪದ ವೇಳೆ ಇಬ್ಬರು ದುಷ್ಕರ್ಮಿಗಳು ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ,  ಭದ್ರತಾ ವೈಫಲ್ಯದ ಹೊಣೆಯನ್ನು ಕೇಂದ್ರ ಗೃಹಸಚಿವ  ಅಮಿತ್ ಶಾ ಹೊರಬೇಕು ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ ಆಗ್ರಹಿಸಿದರು.

ಲೋಕಸಭೆಯಲ್ಲಿನ ಭದ್ರತಾ ವೈಪಲ್ಯ ಕುರಿತು ಇಂದು ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪವಾಯಿತು. ಈ ಕುರಿತು ಮಾತನಾಡಿದ ಎಂಎಲ್ ಸಿ ಬಿ.ಕೆ ಹರಿಪ್ರಸಾದ್,ಈ ಹಿಂದೆ ಉಗ್ರಗಾಮಿಗಳು ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಹುತಾತ್ಮರಿಗೆ ಸಂತಾಪ ಸೂಚಿಸುವ ದಿನವೇ ಈ ಘಟನೆ ನಡೆದಿದೆ. ಹೊಸ ಸಂಸತ್ ಭವನ ಕಟ್ಟಡ ಕಟ್ಟಿದ್ದಾರೆ, ಆದರೂ ದೇಶದ ಭದ್ರತೆ ಕುಸಿದಿದೆ , ಲೋಕಸಭೆ ಭದ್ರತಾ ವೈಫಲ್ಯದ ಹೊಣೆಯನ್ನು ಗೃಹ ಸಚಿವ ಅಮಿತ್ ಶಾ ಹೊರಬೇಕು ಎಂದು ಆಗ್ರಹಿಸಿದರು.

Key words: Lok Sabha –security- breach -case –responsible-Amith sha – BK Hariprasad