2023ರ ಚುನಾವಣೆಗೆ ಸಕ್ರಿಯವಾಗಿ ಕೆಲಸ ಮಾಡಲು ನಿರ್ಧಾರ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ.

ಬೆಂಗಳೂರು,ನವೆಂಬರ್,4,2021(www.justkannada.in): 2023ರ ವಿಧಾನಸಭೆ ಚುನಾವಣೆಗೆ ಸಕ್ರಿಯವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ. ಸಕ್ರಿಯವಾಗಿ ಕೆಲಸ ಮಾಡಲು ಯೋಜನೆ ಸಿದ್ಧವಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದರು.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಯಾವುದೇ ಪಕ್ಷವನ್ನ ಕಟ್ಟಬೇಕಾದರೇ ಆರ್ಥಿಕ ಶಕ್ತಿ ಬೇಕು. ಜೆಡಿಎಸ್ ಪ್ರಾದೇಶಿಕ ಪಕ್ಷ. ಇದನ್ನ ಉಳಿಸಬೇಕು ಎಂದು ನುಡಿದರು.

ಸಿಂದಗಿ ಹಾನಗಲ್ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲು ಕುರಿತು ಮಾತನಾಡಿದ ಹೆಚ್.ಡಿ ದೇವೇಗೌಡರು,  ಎರಡು ಕ್ಷೇತ್ರದಲ್ಲಿ ನಾವು ಮುಸ್ಲೀಂ ಅಭ್ಯರ್ಥಿ ಕಣಕ್ಕಿಳಿಸಿದ್ದವು. ಅಲ್ಲಿ 38 ಸಾವಿರ ಮುಸ್ಲೀಂ ಮತದಾರರಿದ್ದಾರೆ.  ಆ ಮತಗಳು  ಯಾರಿಗೆ  ಹೋಯ್ತು..? ಬಿಜೆಪಿಗೆ ಕೊಟ್ರಾ..? ನಮಗೆ ಮತ ಹಾಕಿಲ್ಲ ಅಂದ್ರೆ ಕಾಂಗ್ರೆಸ್ ಗೆ ಹಾಕ್ತಾರೆ. ಕಾಂಗ್ರೆಸ್ ಸೋಲಿಸಲು ಹೀಗೆ ಮಾಢಿದ್ರು ಎಂದಿದ್ದಾರೆ. ಈ ಬಗ್ಗೆ  ನಾನು ಮಾತನಾಡಲ್ಲ. ಉಪಚುನಾವಣೆ ಪ್ರಚಾರಕ್ಕೆ ಹೋಗಲ್ಲ. ಆದರೆ ಅಲ್ಲಿಗೆ ಪ್ರಚಾರಕ್ಕೆ ಹೋಗಿದ್ದೆ. ಆದರೂ ಸೋಲಾಗಿದೆ ಎಂದರು.

Key words: decision – actively- work – 2023 election-Former Prime Minister -HD Deve Gowda