ದೇಶದಲ್ಲಿ ಒಂದೇ ದಿನ 18,522 ಮಂದಿಗೆ ಕೊರೋನಾ ಸೋಂಕು ಪತ್ತೆ…

Promotion

ನವದೆಹಲಿ,ಜೂ,30,2020(www.justkannada.in):  ದೇಶದಲ್ಲಿ  ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು  ಒಂದೇ ದಿನ ಕಳೆದ 18,522 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.

ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ  5,66,840ಕ್ಕೆ ಏರಿಕೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.  ಇನ್ನು  ಒಂದೇ ದಿನ ಮಹಾಮಾರಿ ವೈರಸ್ ಗೆ 418 ಮಂದಿ ಬಲಿಯಾಗಿದ್ದು, ಈ ವರೆಗೂ ವೈರಸ್’ನಿಂದ ಸಾವನ್ನಪ್ಪಿದವರ ಸಂಖ್ಯೆ 16,893ಕ್ಕೆ  ಏರಿಕೆಯಾಗಿದೆ.18522-people-coronavirus-single-day

5,66,840 ಮಂದಿ ಸೋಂಕಿತರ ಪೈಕಿ 3,34,822 ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words:  18,522 people – coronavirus -single day.