ಮಾಜಿ ಸಚಿವ ಹೆಚ್.ಡಿ ರೇವಣ್ಣರಿಗೂ ಕೊರೋನಾ ಭೀತಿ: ಬೆಂಗಾವಲು ವಾಹನದ ನಾಲ್ವರು ಸಿಬ್ಬಂದಿಗೆ ಸೋಂಕು ಪತ್ತೆ…

ಬೆಂಗಳೂರು,ಜೂ,30,2020(www.justkannada.in0:  ರಾಜ್ಯದಲ್ಲಿ ರಣಕೇಕೆ ಹಾಕುತ್ತಿರುವ ಕೊರೋನಾ ಸೋಂಕಿನ ಭೀತಿ ಇದೀಗ ಮಾಜಿ ಸಚಿವ ಹೆಚ್.ಡಿ ರೇವಣ್ಣಗೂ ಎದುರಾಗಿದೆ.

ಹೌದು, ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಕೆಲಸ ಮಾಡುವ ನಾಲ್ವರು ಸಿಬ್ಬಂದಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ಎಸ್ಕಾರ್ಟ್ ವಾಹನದಲ್ಲಿ ಕಾರ್ಯನಿರ್ವಹಿಸುವ ನಾಲ್ವರು ಸಿಬ್ಬಂದಿಗಳ ಪೈಕಿ ಬೆಂಗಳೂರಿನ ಮೂವರು ಹಾಗೂ ಹಾಸನದ ಒರ್ವ ಸಿಬ್ಬಂದಿಗೆ ಕೊರೋನಾಸೋಂಕು ದೃಢಪಟ್ಟಿದೆ.former-minister-hd-revanna-escort-staff-corona

ಹೀಗಾಗಿ ಹೆಚ್.ಡಿ ರೇವಣ್ಣ ಅವರಿಗೂ ಕೊರೋನಾ ಭೀತಿ ಎದುರಾಗಿದೆ. ಸದ್ಯ ಹೆಚ್.ಡಿ ರೇವಣ್ಣ ಬೆಂಗಳೂರಿನಲ್ಲಿದ್ದು ಅವರಿಗೂ ಕೊರೋನಾ ಪರೀಕ್ಷೆ ಮಾಡುವ ಸಾಧ್ಯತೆ ಇದೆ.

Key words: Former minister -HD Revanna – escort –staff-Corona