13ನೇ ಏಷ್ಯನ್ ಕ್ರೀಡಾಕೂಟ: ಭಾರತಕ್ಕೆ ಅಗ್ರಸ್ಥಾನ

ಕಠ್ಮಂಡು, ಡಿಸೆಂಬರ್ 05, 2019 (www.justkannada.in): 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಬುಧವಾರ ಮೂರನೇ ದಿನ ಮುಕ್ತಾಯಕ್ಕೆೆ ಭಾರತ 32 ಚಿನ್ನ ಸೇರಿದಂತೆ ಭಾರತ ಒಟ್ಟು 71 ಪದಕ ಪಡೆದು ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.

ಬುಧವಾರ ಭಾರತ 15 ಚಿನ್ನದ ಪದಕಗಳನ್ನು ಗೆದ್ದಿದೆ. ಒಟ್ಟಿನಲ್ಲಿ 32 ಚಿನ್ನ, 26 ಬೆಳ್ಳಿ ಹಾಗೂ 13 ಕಂಚಿನ ಪದಕಗಳು ಸೇರಿ ಭಾರತದ ಖಾತೆಗೆ 71 ಪದಕಗಳು ಸೇರ್ಪಡೆಯಾಗಿವೆ.

ಆಥ್ಲೆಟಿಕ್ಸ್ ವಿಭಾಗದಿಂದ 10 (5 ಚಿನ್ನ, 3 ಬೆಳ್ಳಿ, 2 ಕಂಚು) ಪದಕಗಳು, ಟೇಬಲ್ ಟೆನಿಸ್ ನಿಂದ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಎರಡು ಕಂಚು ಸೇರಿದಂತೆ ಆರು ಪದಕಗಳು ಸಂದಿವೆ. ಟೇಕ್ವಾಂಡೋ ವಿಭಾಗದಿಂದ ಆರು ( 3ಚಿನ್ನ, 2 ಬೆಳ್ಳಿ ಹಾಗೂ 1 ಕಂಚು) ಪದಕಗಳು, ಟ್ರಯಾಥ್ಲನ್ ನಿಂದ ಐದು (2 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು) ಪದಕಗಳು ಹಾಗೂ ಖೋ ಖೋ ನಿಂದ ಎರಡು ಚಿನ್ನದ ಪದಕಗಳು ಭಾರತಕ್ಕೆ ಲಭಿಸಿದೆ.
ಏಷ್ಯನ್ ಕ್ರೀಡಾಕೂಟ ಡಿಸೇಂಬರ್ ೧ ರಿಂದ ಹತ್ತು ದಿನಗಳ ಕಾಲ ನಡೆಯಲಿದ್ದು ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು ಆಗ್ರ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ.