‘ಗಾಳಿಪಟ’ ಹಾರಿಸಲು ಶುರು ಮಾಡಿದ ಯೋಗರಾಜ್ ಭಟ್-ಗಣೇಶ್ ಜೋಡಿ

ಬೆಂಗಳೂರು, ಡಿಸೆಂಬರ್ 05, 2019 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್-ಯೋಗರಾಜ್ ಭಟ್ ಯಶಸ್ವೀ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಗಾಳಿಪಟ2 ಚಿತ್ರೀಕರಣ  ಪ್ರಾರಂಭವಾಗಿದೆ.

ಹೌದು. ಕೊನೆಗೂ ಭಟ್ಟರು ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಇದನ್ನು ತಮ್ಮದೇ ಶೈಲಿಯಲ್ಲಿ ಪ್ರಕಟಿಸಿದ್ದಾರೆ.

ಸ್ಕ್ರಾಪ್ ಬುಕ್ ಹಾಳೆಯಲ್ಲಿ ಅಪ್ಪನಿಗೆ ತಪ್ಪು ತಪ್ಪಾಗಿ ಪತ್ರ ಬರೆದಂತೆ ತಮ್ಮ ಸಿನಿಮಾ ಶುರುವಾದ ಸೂಚನೆಯನ್ನು ಭಟ್ಟರು ನೀಡಿದ್ದಾರೆ. ಮುಂದಿನ ವರ್ಷಕ್ಕೆ ಚಿತ್ರ ಬಿಡುಗಡೆಯಾಗಬಹುದು.

ಅಂದಹಾಗೆ ಮುಂಗಾರು ಮಳೆ ಬಳಿಕ ಈ ಇಬ್ಬರೂ ಜತೆಯಾಗಿ ಮಾಡಿ ಹಿಟ್ ಆದ ಸಿನಿಮಾ ಗಾಳಿಪಟ.