100 ಕೋಟಿ ರೂ. ನೆರವು ಘೋಷಿಸಿದ ಇನ್ಫೋಸಿಸ್ ಫೌಂಡೇಶನ್

Promotion

ಬೆಂಗಳೂರು, ಮೇ 10, 2021 (www.justkannada.in):

ಇನ್ಫೋಸಿಸ್ ಫೌಂಡೇಶನ್ ಕೋವಿಡ್ ವಿರುದ್ಧದ ಹೋರಾಟಕ್ಕೆ ಮತ್ತೆ ದೇಣಿಗೆ ನೀಡಿದೆ.

ಕಳೆದ ವರ್ಷ ಕೊರೋನಾ ವಿರುದ್ಧ ಹೋರಾಟಕ್ಕೆ 100 ಕೋಟಿ ರೂ. ನೀಡಿದ್ದ ಸುಧಾ ಮೂರ್ತಿ ಈ ವರ್ಷವೂ 100 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ.

ವೆಂಟಿಲೇಟರ್, ಆಕ್ಸಿಜನ್ ಯಂತ್ರ ಪೂರೈಕೆಗೆ ಬಳಕೆ, ಮೂಲಸೌಕರ್ಯ ಬಳಕೆಗೆ 100 ಕೋಟಿ ರೂಪಾಯಿ ನೀಡುವುದಾಗಿ ಸುಧಾಮೂರ್ತಿ ಪ್ರಕಟಿಸಿದ್ದಾರೆ.

ಇನ್ಫೋಸಿಸ್ ಸಂಸ್ಥೆ ಇರುವ ಮಂಗಳೂರು, ಹೈದರಾಬಾದ್‌, ಪುಣೆ, ನಾಗ್ಪುರ, ತಿರುವನಂತಪುರ ಹಾಗೂ ದೆಹಲಿಯಲ್ಲೂ ಕೊರೋನಾ ನಿಯಂತ್ರಣಕ್ಕೆ ನೆರವು ನೀಡುವುದಾಗಿ ಸುಧಾ ಮೂರ್ತಿ ತಿಳಿಸಿದ್ದಾರೆ.