Thursday, August 20, 2026

BDA Apartments

Home Front Page ಭಾರತ ಕಾಡುತ್ತಿರುವ ಕೊರೊನಾಗೆ ಲಸಿಕೆಯೊಂದೇ ಪರಿಹಾರ: ಅಮೆರಿಕದ ಖ್ಯಾತ ತಜ್ಞ ಡಾ.ಫೌಸಿ ಸಲಹೆ

ಭಾರತ ಕಾಡುತ್ತಿರುವ ಕೊರೊನಾಗೆ ಲಸಿಕೆಯೊಂದೇ ಪರಿಹಾರ: ಅಮೆರಿಕದ ಖ್ಯಾತ ತಜ್ಞ ಡಾ.ಫೌಸಿ ಸಲಹೆ

ಬೆಂಗಳೂರು, ಮೇ 10, 2021 (www.justkannada.in): ಭಾರತವನ್ನು ಕಾಡುತ್ತಿರುವ ಕೊರೋನಾ ಸಮಸ್ಯೆಗೆ ಜನರು ಲಸಿಕೆ ಹಾಕಿಸಿಕೊಳ್ಳುವುದೊಂದೇ ದೀರ್ಘ ಪರಿಹಾರ ಎಂದು ಅಮೆರಿಕದ ಖ್ಯಾತ ತಜ್ಞ ಡಾ.ಫೌಸಿ ಸಲಹೆ ನೀಡಿದ್ದಾರೆ.

ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಲಸಿಕೆ ಉತ್ಪಾದನೆಯನ್ನು ತೀವ್ರಗೊಳಿಸಬೇಕೆಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರಿಗೆ ಮುಖ್ಯ ವೈದ್ಯಕೀಯ ಸಲಹೆಗಾರರೂ ಆಗಿರುವ ಡಾ.ಫೌಸಿ ಸಲಹೆ ನೀಡಿದ್ದಾರೆ.

ಜಗತ್ತಿನಲ್ಲಿಯೇ ಭಾರತದಲ್ಲಿ ಅತಿ ಹೆಚ್ಚು ಕೊರೋನಾ ಲಸಿಕೆ ಉತ್ಪಾದನೆಯಾಗುತ್ತಿದೆ. ಇದಕ್ಕೆ ಸಾಕಷ್ಟು ಸಂಪನ್ಮೂಲವನ್ನು ಕೂಡ ಭಾರತ ಹೊಂದಿದೆ, ಹೀಗಾಗಿ ಎಲ್ಲರಿಗೂ ಶೀಘ್ರವಾಗಿ ಲಸಿಕೆ ನೀಡಲು ಕ್ರಮ ವಹಿಸಬೇಕೆಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಭಾರತದಲ್ಲಿ ಆಸ್ಪತ್ರೆಗಳ ಸಮಸ್ಯೆ ಎದುರಾಗಿರುವ ಬಗ್ಗೆ ಅವರು, ಚೀನಾ ಕಳೆದ ವರ್ಷ ಮಾಡಿದಂತೆ ಭಾರತದಲ್ಲಿ ಕೂಡ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದ್ದಾರೆ.