ನಾನು ಎಂದಿಗೂ ಕನಸುಮನಸಿನಲ್ಲೂ ಪರಿಷತ್ ಚುನಾವಣೆ ಬಗ್ಗೆ ಯೋಚನೆಯೇ ಮಾಡಿಲ್ಲ- ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ.

ಮೈಸೂರು,ನವೆಂಬರ್,23,2021(www.justkannada.in):  ವಿಧಾನ ಪರಿಷತ್ ಚುನಾವಣೆ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ನಾನು ಎಂದಿಗೂ ಕನಸುಮನಸಿನಲ್ಲೂ ಪರಿಷತ್ ಚುನಾವಣೆ ಬಗ್ಗೆ ಯೋಚನೆಯೇ ಮಾಡಿಲ್ಲ. ಆ ಸುದ್ದಿಯನ್ನು ಯಾರು ಸೃಷ್ಟಿಸಿದ್ರೋ ನನಗೆ ಗೊತ್ತಿಲ್ಲ. ನಾನಂತೂ ಎಂದಿಗೂ ಪರಿಷತ್ ಚುನಾವಣೆಯ ಆಕಾಂಕ್ಷಿಯಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಸಿ ಮಹದೇವಪ್ಪ, ವಿಧಾನ ಪರಿಷತ್ ಚುನಾವಣೆಯಲ್ಲಿ ಹಣ ಸೇರಿದಂತೆ ಎಲ್ಲಾ ಬಲಗಳು ವರ್ಕ್ ಆಗುತ್ತವೆ. ಪ್ರಜಾಪ್ರಭುತ್ವದಲ್ಲಿ ಇದು ನಮಗೆ ಇಷ್ಟವಿಲ್ಲದಿದ್ದರೂ ತಡೆಯಲು ಸಾಧ್ಯವಾಗುತ್ತಿಲ್ಲ. ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಮೂರುವರೆ ಸಾವಿರಕ್ಕೂ ಅಧಿಕವಾಗಿ ನಮ್ಮ ಸದಸ್ಯರಿದ್ದಾರೆ. ನಾವು ಮೊದಲ ಪ್ರಾಶಸ್ತ್ಯದಲ್ಲೇ ಗೆಲ್ಲುತ್ತೇವೆ. ಎರಡನೇ ಸ್ಥಾನಕ್ಕೆ ಯಾರು ಯಾರು ಯಾವ ಬಲಗಳನ್ನು ಪ್ರಯೋಗಿಸುತ್ತಾರೋ ಗೊತ್ತಿಲ್ಲ. ಅದರ ಮೇಲೆ ಎರಡನೇ ಸ್ಥಾನದ ಫಲಿತಾಂಶ ನಿಂತಿದೆ ಎಂದರು.former minister-HC Mahadevappa -batting –former CM- Siddaramaiah- Proclamation of defiance

ಹಾಗೆಯೇ ಮೈಸೂರು –ಚಾಮರಾಜನಗರ ಕ್ಷೇತ್ರದಲ್ಲಿ ಹಾಲಿ ಪರಿಷತ್ ಸದಸ್ಯರಿಗೆ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಹಾಲಿ ಪರಿಷತ್ ಸದಸ್ಯರಿಗೆ ಟಿಕೆಟ್ ನೀಡದಿರುವುದಕ್ಕೆ ದೊಡ್ಡ ಕಾರಣಗಳೇನು ಇಲ್ಲ. ಕಾರ್ಯಕರ್ತರು ಬದಲಾವಣೆ ಬಯಸಿದ್ದರು ಹಾಗಾಗಿ ಬೇರೆ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದು ತಿಳಿಸಿದರು.

Key words: mysore-legislative council-election-former Minister-HC Mahadevappa