ಲೋಕಲ್ ವಾರ್ ಗೆ ದಿನಗಣನೆ: ಮೈಸೂರಿನ ಮೊದಲ ಹಂತದ ಐದು ತಾಲ್ಲೂಕುಗಳಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ…..

ಮೈಸೂರು,ಡಿಸೆಂಬರ್,10,2020(www.justkannada.in): ಲೋಕಲ್ ವಾರ್ ಗ್ರಾಮ ಪಂಚಾಯತಿ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮೊದಲ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ‌ ಭರಾಟೆ ಜೋರಾಗಿದೆ.logo-justkannada-mysore

ಈ ನಡುವೆ ಮೈಸೂರಿನ ಮೊದಲ ಹಂತದ ಐದು ತಾಲೂಕುಗಳಲ್ಲಿ‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೊದಲ ದಿನ  173 ನಾಮಪತ್ರ, ಎರಡನೇ ದಿನ 166, ಮೂರನೇ ದಿನ 1206  ನಾಮಪತ್ರಗಳು ಸಲ್ಲಿಕೆಯಾಗಿವೆ. ಹುಣಸೂರಿನಲ್ಲಿ 237 ,ಕೆ ಆರ್ ನಗರ 166, ಪಿರಿಯಾಪಟ್ಟಣ 257, ಹೆಚ್ ಡಿ ಕೋಟೆ 398, ಸರಗೂರು 148 ಅಭ್ಯರ್ಥಿ ಗಳಿಂದ ಉಮೇದುವಾರಿಕೆ ಸಲ್ಲಿಕೆಯಾಗಿದೆ.local-war-gram-panchayath-election-submission-nomination-candidates-five-taluks-mysore

ಐದು ತಾಲ್ಲೂಕಿನ ಒಟ್ಟು 2303  ಸ್ಥಾನಗಳಿಗೆ ಇದುವರೆಗೆ 1314  ಸ್ಥಾನಗಳಿಗೆ ಮಾತ್ರ ಸ್ಪರ್ಧಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ನಾಮಪತ್ರ ಸಲ್ಲಿಕೆಗೆ ಎರಡು ದಿನಗಳು ಮಾತ್ರ ಅವಕಾಶವಿದ್ದು, ನಾಮಪತ್ರ ಸಲ್ಲಿಕೆ‌‌ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ. ಡಿಸೆಂಬರ್ 22 ರಂದು ಮೊದಲ ಹಂತದ ಮತದಾನ ನಡೆದರೇ ಡಿಸೆಂಬರ್ 27 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಇನ್ನು ಡಿಸೆಂಬರ್ 30 ರಂದು ಫಲಿತಾಂಶ ಹೊರಬೀಳಲಿದೆ.

English summary….

GP elections: Candidates submit nominations in 5 taluks in Mysuru District in first phase
Mysuru, Dec. 10, 2020 (www.justkannada.in): Counting of days for the GP elections has started, and the process of submission of nominations by the candidates has gained momentum.
In the first phase, five candidates submitted their nominations in five taluks of Mysuru District. On the first day 173, second day 166, third day 1206 nominations were submitted. local-war-gram-panchayath-election-submission-nomination-candidates-five-taluks-mysore
Nominations for 1314 seats out of the total 2303 seats have been received. The first round of voting will be held on Dec. 22, followed by the second round on Dec. 27. The results will be announced on Dec. 30.
Keywords: GP elections/ nominations begin

Key words: Local War-gram panchayath- election-Submission – nomination – candidates – five taluks –Mysore