ಸಂಸತ್ ನಲ್ಲಿ ವಿವಾದಿತ ಕೃಷಿಕಾಯ್ದೆಗಳು ವಾಪಸ್: ಲೋಕಸಭೆಯಲ್ಲಿ ವಿಪಕ್ಷಗಳಿಂದ ಭಾರಿ ಗದ್ಧಲ..

Promotion

ನವದೆಹಲಿ,ನವೆಂಬರ್,29,2021(www.justkannada.in):  ರೈತರ ಹೋರಾಟಕ್ಕೆ ಮಣಿದು ವಿವಾದಿತ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಾಪಸ್ ಪಡೆಯುವುದಾಗಿ ಘೋಷಿಸಿದ್ಧ ಕೇಂದ್ರ ಸರ್ಕಾರ ಇದೀಗ ಸಂಸತ್ ಚಳಿಗಾಲದ ಅಧಿವೇಶನದ ಮೊದಲ ದಿನವೇ ಕಾಯ್ದೆಗಳನ್ನ ಹಿಂಪಡೆದಿದೆ.

ಸಂಸತ್ ಅಧಿವೇಶನ ಆರಂಭವಾದ ಬಳಿಕ ಕೇಂದ್ರ ಕೃಷಿ ಸಚಿವ ತೋಮರ್ ವಿವಾದಿತ ಕೃಷಿ ತಿದ್ಧುಪಡಿ ಕಾಯ್ದೆಗಳನ್ನ ಹಿಂಪಡೆದರು. ಈ ವೇಳೆಯಲ್ಲಿ ವಿಪಕ್ಷಗಳಲ್ಲ ಲೋಕಸಭೆಯಲ್ಲಿ ಭಾರಿ ಗದ್ದಲವನ್ನುಂಟು ಮಾಡಿದ್ದು, ಕೃಷಿ ಕಾಯ್ದೆ ಕುರಿತು ಚರ್ಚೆಗೆ ಪಟ್ಟು ಹಿಡಿದರು.

ಚರ್ಚೆ ನಡೆಸದೇ ಕೃಷಿ ಕಾಯ್ದೆ ಹಿಂಪಡೆಯುತ್ತಿರುವುದೇಕೆ.ಕಾಯ್ದೆಗಳನ್ನ ವಾಪಸ್ ಪಡೆಯುವ ಬಗ್ಗೆ  ವಿವರಣೆ ನೀಡಲಿ ಎಂದು ವಿಪಕ್ಷಗಳು ಬಿಗಿಪಟ್ಟು ಹಿಡಿದವು. ಲೋಕಸಭೆಯಲ್ಲಿ ಭಾರಿ ಗದ್ಧಲ ಉಂಟಾದ ಹಿನ್ನೆಲೆ ಲೋಕಸಭೆ ಸ್ಪೀಕರ್ ಕಲಾಪವನ್ನ ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

Key words: Disputed -Agriculture Act- Back – Parliament-session

ENGLISH SUMMARY…

LS repeals controversial agri bill: Opposition parties create furore
New Delhi, November 29, 2021 (www.justkannada.in): The Government of India had announced that the amended agricultural laws, which led to massive protests by the farmers across the country would be repealed. As said, they have been repealed in the Lok Sabha today, on the first day of the winter session.
Union Agriculture Minister Tomar, today announced in the Lok Sabha session that the amended agricultural laws are being withdrawn, which led to a ruckus by the opposition parties, which demanded a discussion regarding the decision of the ruling party.
The opposition leaders questioned why it is being withdrawn without any discussion and demanded to explain. The Lok Sabha speaker was forced to put off the session till 2.00 pm following the furor.
Keywords: Lok Sabha/ Agri laws/ repeal/ withdrawn