ಮತಾಂತರ ನಿಷೇಧ ಕಾಯ್ದೆಗೆ ವಿರೋಧ: ಪರಿಷತ್ ನಲ್ಲಿ ಮತಕ್ಕೆ ಹಾಕಲು ಪ್ಲ್ಯಾನ್ – ಡಿ.ಕೆ ಶಿವಕುಮಾರ್.

Promotion

ಬೆಳಗಾವಿ,ಡಿಸೆಂಬರ್,23,2021(www.justkannada.in):  ವಿಧಾನಸಭೆಯಲ್ಲಿ ಮಂಡನೆಯಾಗಿರುವ ಮತಾಂತರ ನಿಷೇಧ ಕಾಯ್ದೆ ಮೇಲೆ ಭಾರಿ ಚರ್ಚೆ ನಡೆಯುತ್ತಿದ್ದು ಈ ಮಧ್ಯೆ ವಿಧಾನಪರಿಷತ್ ನಲ್ಲಿ ಮತಕ್ಕೆ ಹಾಕಲು ಪ್ಲ್ಯಾನ್ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಸಂಖ್ಯಾ ಬಲ ಇದೆ ಎಂದು ಆಡಳಿತ ಪಕ್ಷದವರು ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ.   ಯಾರೇ ಆಗಲಿ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ನಮಗೆ ವಿಧಾನಸಭೆಯಲ್ಲಿ ಸಂಖ್ಯಾಬಲ ಇಲ್ಲ. ಆದರೆ ವಿಧಾನ ಪರಿಷತ್ ನಲ್ಲಿ ನಮಗೆ ಬಹುಮತವಿದೆ. ಹೀಗಾಗಿ ಪರಿಷತ್ ನಲ್ಲಿ ಮತಕ್ಕೆ ಹಾಕಲು ಪ್ಲ್ಯಾನ್ ಮಾಡಿದ್ದೇವೆ ಎಂದರು.

ಇದೇ ವೇಳೆ ಜೆಡಿಎಸ್ ಗೆ ಟಾಂಗ್ ನೀಡಿದ ಡಿ.ಕೆ ಶಿವಕುಮಾರ್, ವಿಧಾನಸಭೆಯಲ್ಲಿ ನಮಗೆ ಹೇಳುವುದೊಂದು ಮಾಡುವುದೊಂದು ಎಂದು ಕಿಡಿಕಾರಿದರು.

Key words: Opposition – conversion ban- Plan – vote-legislative council-kpcc president-  DK Sivakumar.