ಬೆಂಗಳೂರಿನ ಎರಡು ಅಪರೂಪದ ಸಂಗೀತ ಗೋಪುರಗಳು!

ಬೆಂಗಳೂರು, ಡಿಸೆಂಬರ್ ೨೧, ೨೦೨೧ (www.justkannada.in): ವೂಲ್ಫ್ಗ್ಯಾಂಗ್ ಅಮೇಡಿಯಸ್ ಮೊಝರ್ಟ್ು ೧೭ನೇ ಶತಮಾನದ ಅತ್ಯಂತ ಪ್ರಸಿದ್ಧ ಸಂಗೀತ ಸಂಯೋಜಕ. ೧೭ನೇ ಶತಮಾನ ಪಾಶ್ಚಿಮಾತ್ಯ ಶಾಸ್ತಿçÃಯ ಸಂಗೀತಜ ಸ್ವರ್ಣಯುಗವೆಂದೇ ಹೇಳಲಾಗುತ್ತದೆ. ಮೊಝರ್ಟ್. ನೇತಾಡುವ ಪೈಪುಗಳಂತೆ ಕಂಡು ಬರುವ ಸಂಗೀತವಾದ್ಯವನ್ನು ‘ಸಂಗೀತ ವಾದ್ಯಗಳ ರಾಜ’ ಎಂದೇ ಉಲ್ಲೇಖಿಸಿ ತಮ್ಮ ತಂದೆಗೆ ಪತ್ರ ಬರೆಯುತ್ತಿದ್ದರಂತೆ. ಆಗಿನಿಂದ ಈವರೆವಿಗೂ ಈ ಅಪರೂಪದ, ಅತೀ ದೊಡ್ಡ, ಸಂಕೀರ್ಣ, ದುಬಾರಿ ಹಾಗೂ ಅತ್ಯಾಶ್ಛರ್ಯವನ್ನು ಮೂಡಿಸುವ ಸಂಗೀತ ವಾದ್ಯ ತನ್ನ ಪಾವಿತ್ರö್ಯತೆಯನ್ನು ಹಾಗೇ ಉಳಿಸಿಕೊಂಡು ಬಂದಿದೆ. ಶತಮಾನಗಳು ಕಳೆದಂತೆ ಇಂತಹ ಇನ್ನೂ ಹಲವಾರು ‘ವಾದ್ಯಗಳ ರಾಜ’ವೆಂದೇ ಗುರುತಿಸಿಕೊಂಡಿರುವ ಸಂಗೀತ ವಾದ್ಯಗಳನ್ನು ಸೃಷ್ಟಿಸಿ, ಬಳಸಿ, ಸಂರಕ್ಷಿಸಿಕೊAಡು ಬರಲಾಗುತ್ತಿದೆ, ಅದೂ ವಿಶೇಷವಾಗಿ ಚರ್ಚುಗಳಲ್ಲಿ.
ಬೆಂಗಳೂರಿನ ಎಂಜಿ ರಸ್ತೆಯ ಬಳಿ ಇರುವ ಸೆಂಟ್ ಮಾರ್ಕ್ಸ್ ಕ್ಯಾಥೆಡ್ರಲ್‌ನಲ್ಲಿ ಇಂತಹ ಅಪರೂಪದ ‘ಪೈಪ್ ಆರ್ಗನ್’ (ಸಂಗೀತ ವಾದ್ಯ ಉಪಕರಣ) ಬಹಳ ಕಾಲದಿಂದಲೂ ಸ್ವಲ್ಪವೂ ತನ್ನ ಅಂದವನ್ನು ಕೆಡಿಸಿಕೊಳ್ಳದೆ ಉಳಿದಿದೆ. ಸುಮಾರು ೯೩ ವರ್ಷಗಳ ಪುರಾತನವಾದ ಈ ವಾದ್ಯದ ಕೆಲವು ಭಾಗಗಳು ಮಾತ್ರ ಸ್ವಲ್ಪ ಕಳೆಯನ್ನು ಕಳೆದುಕೊಂಡಿದ್ದರೂ, ಸಹ ಅದನ್ನು ತಕ್ಕ ಮಟ್ಟಿಗೆ ಸರಿಪಡಿಸಲಾಗಿದೆ. ಈ ಚರ್ಚಿನಲ್ಲಿ ಸಂಗೀತ ವಾದ್ಯವನ್ನು ನುಡಿಸುವಂತಹ ಅವಿನಾಶ್ ಗ್ರಬ್ಬ್ ಅವರು ಈ ಅಪರೂಪದ ಹಾಗೂ ಆಶ್ಚರ್ಯ ಮೂಡಿಸುವ ಸಂಗೀತ ಸಾಧನವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ವರ್ಣಿಸುತ್ತಾರೆ. ಕೈಗಳಲ್ಲಿ ಕೀಬೋರ್ಡ್ ಅನ್ನು ನುಡಿಸುತ್ತಾ, ಕಾಲುಗಳಲ್ಲಿ ಫುಟ್ ಪೆಡೆಲ್‌ಗಳನ್ನು ಬಳಸುತ್ತಾ ಜೊತೆಗೆ ಹಾಡನ್ನೂ ಹೇಳುತ್ತಾ ಈ ಸಂಗೀತ ಸಾದನವನ್ನು ವರ್ಣಿಸುತ್ತಾರೆ.
೨೦೦೪ರಲ್ಲಿ ಗ್ರಬ್ಬ್ ಅವರು ಸೆಂಟ್ ಮಾರ್ಕ್ಸ್ ಚರ್ಚ್ನಲ್ಲಿದ್ದಂತಹ ಹಿಂದಿನ ಸಂಗೀತಗಾರ ಡೇವಿಡ್ ಸೆಬಾಸ್ಟಿಯನ್ ಅವರ ಸ್ಥಾನವನ್ನು ತುಂಬಿದರು. ಅದಕ್ಕಿಂತಲೂ ಮುಂಚೆ, ಗ್ರಬ್ಬ್ ಅವರು ಕೇವಲ ೧೮ ವರ್ಷಗಳವರಿದ್ದಾಗಲೇ ಸೆಬಾಸ್ಟಿಯನ್ ಅವರಿಂದ ಈ ಸಂಗೀತವಾದ್ಯವನ್ನು ನುಡಿಸಲು ತರಬೇತಿಯನ್ನು ಪಡೆದುಕೊಂಡಿದ್ದರAತೆ. ಈ ವಾದ್ಯವನ್ನು ನುಡಿಸುವುದರ ಜೊತೆಗೆ ಗ್ರಬ್ಬ್ ಅವರು ಈ ಅಪರೂಪದ ಸಂಗೀತ ವಾದ್ಯದ ಚರಿತ್ರೆಯನ್ನು ತಿಳಿದುಕೊಳ್ಳುವಲ್ಲಿ, ಹಾಗೂ ಈಗ ತಿಳಿಸುವಲ್ಲಿಯೂ ಕುತೂಹಲವನ್ನು ಉಳಿಸಿಕೊಂಡಿದ್ದಾರೆ.
ಈ ಚರ್ಚ್ ನಿರ್ಮಾಣ ಮಾಡಲು ೧೮೦೮ರಲ್ಲಿ ಅಡಿಪಾಯವನ್ನು ಹಾಕಲಾಯಿತು. ೧೮೧೨ರಲ್ಲಿ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡವು. ಫೆಬ್ರವರಿ ೧೭, ೧೯೨೩ರಲ್ಲಿ ಬೆಂಕಿ ಆಕಸ್ಮಿಕವೊಂದರಲ್ಲಿ ಈ ಚರ್ಚ್ನ ಕಟ್ಟಡಕ್ಕೆ ಹಾನಿಯಾಯಿತು. ಪುನಃ ೧೯೨೬ರಲ್ಲಿ ಮರುನಿರ್ಮಾಣಗಳನ್ನು ಕೈಗೆತ್ತಿಕೊಂಡು ೧೯೨೮ರಲ್ಲಿ ಪೂರ್ಣಗೊಳಿಸಲಾಯಿತು ಎಂದು ದಾಖಲೆಗಳು ತಿಳಿಸುತ್ತವೆ.
೧೯೨೮ರಲ್ಲಿ ಈ ಅಪರೂಪದ ಸಂಗೀತ ಸಾಧನ ‘ಪೈಪ್ ಆರ್ಗನ್’ ಅನ್ನು ಅಳವಡಿಸಲಾಯಿತಂತೆ. “ಈ ಪೈಪ್ ಆರ್ಗನ್ ಕೌಡ್ರೆ ಕುಟುಂಬದ (ಕ್ರಿಕೆಟಿಗ ಮೈಕೆಲ್ ಕೋಲಿನ್ ಕೌಡ್ರೆ ಅವರ ತಂದೆ) ಆವಿಸ್ ಕೌಡ್ರೆ ಅವರ ಉಡುಗೊರೆ. ಈ ಸಂಗೀತ ವಾದ್ಯವನ್ನು ಇಬ್ಬರು ಬ್ರಿಟಿಷರು ವಿನ್ಯಾಸಪಡಿಸಿದರು. ಈ ವಾದ್ಯದ ಲೋಹದ ಪೈಪುಗಳನ್ನು ಇಂಗ್ಲೆAಡ್‌ನಲ್ಲಿ ತಯಾರಿಸಲಾಯಿತು. ಇತರೆ ಭಾಗಗಳನ್ನು ಬೆಂಗಳೂರಿನಲ್ಲೇ ತಯಾರಿಸಲಾಯಿತು. ಆಗ ಈ ಸಂಗೀತ ವಾದ್ಯವನ್ನು ತಯಾರಿಸಲು ರೂ.೮೦,೦೦೦ ವೆಚ್ಚವಾಗಿತ್ತು. ಆಗಿನ ಕಾಲಕ್ಕೆ ಇದು ಬಹಳ ದೊಡ್ಡ ಮೊತ್ತ,” ಎನ್ನುತ್ತಾರೆ ಗ್ರಬ್ಬ್.
“ಈ ವಾದ್ಯದ ಹೆಸರೇ ತಿಳಿಸುವಂತೆ ಇದೊಂದು ಗಾಳಿ ಸಾಧನ (wind instrument) ಹಾಗೂ ಇದರ ಪೈಪುಗಳು ಸಂಗೀತವನ್ನು ಸೃಷ್ಟಿಸುತ್ತದೆ. ಇದರಲ್ಲಿರುವ ಕೀಬೋರ್ಡ್ನಲ್ಲಿ ೬೧ ನೋಟ್ಸ್ಗಳಿದ್ದು, ಪ್ರತಿಯೊಂದು ನೋಟ್‌ಗೂ ಒಂದೊAದು ಪೈಪ್ ಇದೆ. ಒಂದೊAದು ಪೈಪನ್ನು ಆ ನೋಟ್‌ಗಳು ಹಾಗೂ ಅದರಿಂದ ಹೊರಹೊಮ್ಮುವ ಸಂಗೀತಕ್ಕೆ ತಕ್ಕಂತೆ ಎತ್ತರ ಹಾಗೂ ಅಳತೆಯಲ್ಲಿ ಅಳವಡಿಸಲಾಗಿದೆ. ಈ ಸಾಧನದಲ್ಲಿ ನಾವು ಒಮ್ಮೆಗೆ ಹಲವು ಆಕ್ಟೇವ್‌ಗಳನ್ನು (ಪೈಪುಗಳ ಸರಣಿ) ನುಡಿಸುತ್ತೇವೆ, ಬೇರೆ ಯಾವುದೇ ಸಾಧನದಲ್ಲಿಯೂ ಇದು ಸಾಧ್ಯವಿಲ್ಲ,” ಎಂದು ವಿವರಿಸುತ್ತಾರೆ ಗ್ರಬ್ಬ್.
ಈ ಸಾಧನದಿಂದ ಹೊರಹೊಮ್ಮುವ ಗಾಳಿ ವಿಶೇಷವಾದ ಸಂಗೀತವನ್ನು ಸೃಷ್ಟಿಸುತ್ತದೆ. ಇದು ಈ ವಾದ್ಯದ ಬಹಳ ಮುಖ್ಯವಾದ ಭಾಗವೂ ಆಗಿದೆ. ಹಿಂದಿನ ದಿನಗಳಲ್ಲಿ ಈ ಸಾಧನದಿಂದ ಗಾಳಿಯನ್ನು ಹೊರಹೊಮ್ಮಿಸಲು ನಾಲ್ಕು ಜನರು ಗಾಳಿಯನ್ನು ಪಂಪ್ ಮಾಡಬೇಕಾಗುತಿತ್ತಂತೆ. ಆದರೆ ಈ ಸಂಗೀತ ಸಾಧನವನ್ನು ಸೆಂಟ್ ಮಾರ್ಕ್ಸ್ ಕ್ಯಾಥೆಡ್ರಲ್‌ನಲ್ಲಿ ಅಳವಡಿಸಿದ ನಂತರ ಯುನೈಟೆಡ್ ಕಿಂಗ್‌ಡAನಿAದ ಒಂದು ಮೋಟಾರ್ ಅನ್ನು ತರಿಸಿದ್ದು, ಈವರೆಗೂ ಕಾರ್ಯನಿರ್ವಹಿಸುತ್ತಿದ್ದು, ಸುಸ್ಥಿತಿಯಲ್ಲಿದೆ.
ಈ ಸಂಗೀತ ವಾದ್ಯವನ್ನು ನುಡಿಸುವುದು ಬಹಳ ಕಷ್ಟವಂತೆ. ಈ ವಾದ್ಯದಿಂದ ಬರುವ ಶಬ್ದವನ್ನು ಆಲಿಸಿ, ಸರಿಯಾದ ಸಂಗೀತವನ್ನು ನುಡಿಸಲು ದೇಹದ ಎಲ್ಲಾ ಇಂದ್ರಿಯಗಳೂ ಜಾಗರೂಕವಾಗಿರಬೇಕು ಮತ್ತು ಕೈಗಳು ಹಾಗೂ ಕಾಲುಗಳು ಚಲಿಸುತ್ತಲೇ ಇರಬೇಕಾಗುತ್ತದೆ. ಬಹುಮುಖ್ಯವಾಗಿ ಕಣ್ಣುಗಳು ಗಾಯಕವೃಂದವನ್ನು (choir) ಗಮನಿಸುತ್ತಿರಬೇಕು. ಇದಕ್ಕಾಗಿ ಮೂರು ಕನ್ನಡಿಗಳಿವೆ. “ಈ ಸಾಧನದ ಸಂಗೀತ ನುಡಿಸುವುದು ಬಹಳ ಕಷ್ಟ, ಏಕೆಂದರೆ ಇದೊಂದು ಶಾಸ್ತಿçÃಯ ಸಂಗೀತದ ವಾದ್ಯ. ಆದರೂ ಸಹ ಈ ಸಂಪ್ರದಾಯವನ್ನು ನಾವು ಮುಂದುವರೆಸಿಕೊAಡು ಬರುತ್ತಿದ್ದೇವೆ,” ಎನ್ನುತ್ತಾರೆ ಗ್ರಬ್ಬ್.
ಸೆಂಟ್ ಮಾರ್ಕ್ಸ್ ಕೆಥೆಡ್ರಲ್‌ನಿಂದ ಕೆಲವೇ ಕಿ.ಮೀ.ಗಳ ದೂರದಲ್ಲಿ ಸೆಂಟ್ ಆ್ಯಂಡ್ರೂ ಚರ್ಚ್ ಇದೆ. ನವೆಂಬರ್ ೨೦೧೪ರಲ್ಲಿ ಈ ಚರ್ಚ್ ೧೫೦ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಈ ಚರ್ಚ್ ನವೆಂಬರ್ ೧೮, ೧೮೬೬ರಲ್ಲಿ ಆರಂಭವಾಯಿತು. ಆಗಿನ ಬ್ರಿಟಿಷ್ ಮಡ್ರಾಸ್ ಆರ್ಮಿ ಹಾಗೂ ಸ್ಕಾಟಿಷ್ ಸಿವಿಲಿಯನ್‌ರು ಇದರ ರೂವಾರಿಗಳಾಗಿದ್ದರು. ಈ ಚರ್ಚ್ನಲ್ಲಿ ೧೯೬೫ರಲ್ಲಿ ಕನ್ನಡದಲ್ಲಿ ಸೇವೆಗಳನ್ನು ಆರಂಭಿಸಲಾಯಿತು.
ಅತ್ಯAತ ಸುಂದರವಾಗಿರುವ ಈ ಚರ್ಚ್ಗೆ ಹಲವಾರು ಪ್ರಸಿದ್ಧ ಸಂಗೀತಗಾರರು, ಕಲಾವಿದರು ಹಾಗೂ ಆರ್ಕಿಟೆಕ್ಟ್ಗಳು ಭೇಟಿ ನೀಡುತ್ತಿರುತ್ತಾರೆ. ಪ್ರಾಚೀನ ವಿನ್ಯಾಸ ಹಾಗೂ ಅತ್ಯದ್ಭುತವಾದ ಬಣ್ಣದ ಚಿತ್ತಾರಗಳಿಂದ ಕೂಡಿರುವ ಗಾಜುಗಳಿಂದ ಅಲಂಕಾರಗೊAಡಿರುವ ಈ ಚರ್ಚ್ನಲ್ಲಿ ೧೪೦ ವರ್ಷ ಹಳೆಯದಾದ ಒಂದು ‘ಪೈಪ್ ಆರ್ಗನ್’ ಇದೆ. ಈ ಪುರಾತನ ಸಾಧನವನ್ನು ಸೆಂಟ್ ಆ್ಯಂಡ್ರೂಸ್ ಚರ್ಚ್ನ ‘great little monster ‘ ಎಂದು ಕರೆಯಲಾಗುತ್ತದೆ. ಇದನ್ನು ೧೮೮೧ರಲ್ಲಿ ಪೀಟರ್ ಗೊಣೆಚರ್ ಎನ್ನುವವರು ಅಳವಡಿಸಿದರಂತೆ. ಇದು ಬೆಂಗಳೂರು ನಗರದಲ್ಲಿರುವ ಅತ್ಯಂತ ಪುರಾತನ ಸಾಧನಬವಾಗಿದೆ.
ಈ ಚರ್ಚ್ಗೆ ಬರುವ ಹಿರಿಯ ನಾಗರಿಕರ ಪ್ರಕಾರ ಬ್ರಿಟಿಷರ ಕಾಲದಲ್ಲಿ, ಈ ಸಂಗೀತ ವಾದ್ಯದಿಂದ ಹೊರಹೊಮ್ಮುವ ಸಂಗೀತ ಇಲ್ಲಿಂದ ೧.೫ ಕಿ.ಮೀ.ಗಳ ದೂರದಲ್ಲಿರುವ ಕಬ್ಬನ್ ಪಾರ್ಕ್ವರೆಗೂ ಕೇಳಿಸುತಿತ್ತು. ಆದರೆ ಹೆಚ್ಚಾದ ವಾಹನ ಸಂಚಾರ ದಟ್ಟಣೆಯಿಂದಾಗಿ ಈಗ ಇದು ಸಾಧ್ಯವಿಲ್ಲ ಎನ್ನುತ್ತಾರೆ. ಸಂಗೀತದಲ್ಲಿ ಇಷ್ಟು ಶ್ರೀಮಂತ ಚರಿತ್ರೆಯನ್ನು ಹೊಂದಿರುವ ಈ ಚರ್ಚ್ ಸಂಗೀತದ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. “ಕೋವಿಡ್ ಸಾಂಕ್ರಾಮಿಕದ ಹಿಂದಿನ ದಿನಗಳಲ್ಲಿ ತಿಂಗಳ ಪ್ರತಿ ಐದನೇ ಭಾನುವಾರದಂದು ಇಲ್ಲಿಗೆ ಸಂಗೀತಗಾರರ ತಂಡ ಬಂದು ಸಂಗೀತವನ್ನು ನುಡಿಸುತ್ತಿದ್ದರು. ಆ ಸಂಗೀತ ಕಚೇರಿಯನ್ನು ನೋಡಲು, ಚರ್ಚ್ ನೋಡಲು ಯಾರು ಬೇಕಾದರೂ ಬರಬಹುದು,” ಎನ್ನುತ್ತಾರೆ ಈ ಚರ್ಚ್ನ ಮಾರ್ಕ್.
ಕ್ರಿಸ್‌ಮಸ್ ಹಬ್ಬ ಹತ್ತಿರದಲ್ಲೇ ಇದ್ದು, ಈ ಹಿನ್ನೆಲೆಯಲ್ಲಿ ಈ ‘ಸಂಗೀತ ವಾದ್ಯಗಳ ರಾಜ’ರನ್ನು ಮತ್ತೊಮ್ಮೆ ಬೆಂಗಳೂರಿಗರಿಗೆ ಪರಿಚಯಿಸಲು ಹಾಗೂ ಹಿಂದಿನ ಕಾಲದ ಸಂಗೀತವನ್ನು ಪ್ರಸ್ತುತಪಡಿಸಲು ಎಲ್ಲವೂ ಸಜ್ಜಾಗುತ್ತಿದೆ.
ಕುತೂಹಲಕರವಾಗಿದೆ ಅಲ್ಲವೇ? ನೀವು ಒಮ್ಮೆ ಭೇಟಿ ನೀಡುವಿರಾ?
ಸುದ್ದಿ ಮೂಲ: ಹಿಂದೂಸ್ತಾನ್ ಟೈಮ್ಸ್

key words: Two- Rare -Music -Towers- Bangalore