Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮೈಸೂರಿನಲ್ಲಿ ಮೊದಲ ಒಮ್ರಿಕಾನ್ ಪ್ರಕರಣ ಪತ್ತೆ.

ಮೈಸೂರಿನಲ್ಲಿ ಮೊದಲ ಒಮ್ರಿಕಾನ್ ಪ್ರಕರಣ ಪತ್ತೆ.

ಮೈಸೂರು,ಡಿಸೆಂಬರ್,23,2021(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೊದಲ ಒಮ್ರಿಕಾನ್ ಪ್ರಕರಣ ಪತ್ತೆಯಾಗಿದೆ.

ಒಂಬತ್ತು ವರ್ಷದ ಮಗುವಿಗೆ ಒಮೈಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಹೊರದೇಶದಿಂದ 9 ವರ್ಷದ ಹೆಣ್ಣು ಮಗುವಿge ಒಮಿಕ್ರಾನ್ ಸೋಂಕು ತಗುಲಿದ್ದು, ಮಗುವಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಸದ್ಯ ಮಗುವನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಪ್ರಾಥಮಿಕ ದ್ವಿತೀಯ ಸಂಪರ್ಕಿತರ ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಡಿಸೆಂಬರ್.19 ರಂದು ಪೋಷಕರ ಜೊತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಂಕಿತ ಮಗು ಆಗಮಿಸಿತ್ತು. ಡಿ.19 ರಂದು ರಕ್ತ ಸ್ಯಾಂಪಲ್ ಪಡೆಯಲಾಗಿತ್ತು.ನಿನ್ನೆ ಮಗುವಿಗೆ ಒಮಿಕ್ರಾನ್ ಪಾಸಿಟಿವ್ ದೃಢವಾಗಿದೆ. ಪೋಷಕರಿಗೆ ಒಮಿಕ್ರಾನ್ ನೆಗೆಟಿವ್, ಮಗುವಿಗೆ ಪಾಸಿಟಿವ್ ಬಂದಿದೆ.  ಸದ್ಯ ಸೋಂಕಿತ ಮಗು ಆರೋಗ್ಯವಾಗಿದೆ.  ಮಗುವಿನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರ ಮಾಹಿತಿಯನ್ನ ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ ಎಂದು ಡಿ.ಎಚ್‌.ಓ. ಪ್ರಸಾದ್ ಮಾಹಿತಿ ನೀಡಿದ್ದಾರೆ.

Key words: First -Omrican case -detected – Mysore