ಅಬಕಾರಿ ಅಧಿಕಾರಿಗಳಿಂದ ವಿವಿಧ ಮಾದರಿಯ ಮದ್ಯ, ಬಿಯರ್ ನಾಶ

ಮೈಸೂರು, ಸೆಪ್ಟೆಂಬರ್, 05, 2020(www.justkannada.in) :  ಅಬಕಾರಿ ಇಲಾಖೆಯು ನಗರದ ವಿವಿಧೆಡೆ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಮದ್ಯವನ್ನು ಮೇಲಾಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು.

jk-logo-justkannada-logo

ಶನಿವಾರ ನಜರ್ ಬಾದ್ ಕಛೇರಿ ಆವರಣದಲ್ಲಿ ಅಬಕಾರಿ ಇಲಾಖೆಯ ವಲಯ ನಂಬರ್ 1 ಹಾಗೂ ವಲಯ ನಂಬರ್ 3 ರ ಅಬಕಾರಿ ನಿರೀಕ್ಷಕರ ಕಚೇರಿಗಳಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ವಿವಿಧ ಮಾದರಿಯ 162 ಲೀಟರ್ ಮದ್ಯ ಹಾಗೂ 80 ಲೀಟರ್ ಬಿಯರ್ ಅನ್ನು ನಾಶಪಡಿಸಲಾಯಿತು.

From-excise-authorities-Destroy-different-varieties-beer

ಈ ಸಂದರ್ಭ ಅಬಕಾರಿ ಉಪ ಅಧೀಕ್ಷಕ ಎಂ.ಮಹದೇವ್, ನಿರೀಕ್ಷಕರಾದ ಎ.ಸಿ.ಲತಾ, ಪಿ.ಪ್ರೇಮ, ಉಪನಿರೀಕ್ಷಕರಾದ ವಿ.ಲೋಕೇಶ್, ಚೌಡನಾಯಕ, ಹಾಗೂ ಸಹ ಸಿಬ್ಬಂದಿಗಳಾದ ರಾಜಶೇಖರ್,ಮೋಹನ್ ಕುಮಾರ್, ರಘುರಾಜ್ , ನಿಂಗರಾಜ್ ಇತರರು ಉಪಸ್ಥಿತರಿದ್ದರು.

 

key words : From-excise-authorities-Destroy-different-varieties-beer