ನಾಳೆ ಅಮೆಜಾನ್ ಪ್ರೈಮ್’ನಲ್ಲಿ ‘ಫ್ರೆಂಚ್ ಬಿರಿಯಾನಿ ಬಡಿಸಲಿರುವ’ ಪಿಆರ್’ಕೆ ಪ್ರೊಡಕ್ಷನ್ !

ಬೆಂಗಳೂರು, ಜುಲೈ 23, 2020 (www.justkannada.in): ನಾಳೆ ಆನ್ ಲೈನ್ ನಲ್ಲಿ ಬಿಸಿ ಬಿಸಿ ಫ್ರೆಂಚ್ ಬಿರಿಯಾನಿ ತಿನ್ನಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ!

ಹೌದು. ಪನ್ನಗಾಭರಣ ನಿರ್ದೇಶನ ಮಾಡಿರುವ ವಾಸುಕಿ ವೈಭವ್ ಸಂಗೀತ ನಿರ್ದೇಶನದ ಈ ಸಿನಿಮಾ ಫ್ರೆಂಚ್ ಬಿರಿಯಾನಿ ನಾಳೆ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗುತ್ತಿದೆ.

ಲಾಕ್ ಡೌನ್ ನಿಂದಾಗಿ ಸದ್ಯಕ್ಕೆ ಥಿಯೇಟರ್ ನಲ್ಲಿ ಬಿಡುಗಡೆ ಸಾಧ‍್ಯವಾಗುತ್ತಿಲ್ಲ. ಹೀಗಾಗಿ ಅಮೆಝೋನ್ ಪ್ರೈಮ್ ಆಪ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಆಪ್ ಡೌನ್ ಲೋಡ್ ಮಾಡಿಕೊಂಡು ಸಬ್ ಸ್ಕ್ರೈಬ್ ಆಗಿ ಸಿನಿಮಾ ವೀಕ್ಷಿಸಬಹುದಾಗಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ತಯಾರಾದ ಮತ್ತೊಂದು ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಕಳೆದ ವಾರ ರಾಗಿಣಿ ಪ್ರಜ್ವಲ್ ಅಭಿನಯಿಸಿದ್ದ ‘ಲಾ’ ಸಿನಿಮಾ ಬಿಡುಗಡೆಯಾಗಿತ್ತು.