ರಕ್ಷಿತ್ ಶೆಟ್ಟಿ ಸಿನಿ ಪಯಣಕ್ಕೆ ದಶಕ !

ಬೆಂಗಳೂರು, ಜುಲೈ 23, 2020 (www.justkannada.in): ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ಪ್ರವೇಶಿಸಿ ಇಂದಿಗೆ ಹತ್ತು ವರ್ಷ ಪೂರೈಸಿದೆ.

ನಮ್ ಏರಿಯಾಲ್ ಒಂದಿನ- ಬಿಡುಗಡೆಯಾಗಿ ಇಂದಿಗೆ ಹತ್ತು ವರ್ಷ. ನನ್ನ ವೃತ್ತಿಜೀವನಕ್ಕೆ ಅಡಿಪಾಯವಾದ ಚಿತ್ರವದು. ನಿನ್ನೆ-ಮೊನ್ನೆ ತಾನೇ ತೆರೆ ಕಂಡಂತಿದೆ ಎಂದು ಹಳೆ ನೆನಪುಗಳನ್ನು ರಕ್ಷಿತ್ ಮೆಲುಕು ಹಾಕಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿದ ಬಗ್ಗೆ ಖುಷಿ ವ್ಯಕ್ತಪಡಿಸಿರುವ ನಟ ರಕ್ಷಿತ್ ಶೆಟ್ಟಿ ಟ್ವಿಟ್ಟರ್ ನಲ್ಲಿ ತಮ್ಮ ವೃತ್ತಿಬದುಕಿನ ಪ್ರಾರಂಭದ ದಿನಗಳನ್ನು ಸ್ಮರಿಸಿದ್ದಾರೆ.

ಸದ್ಯ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಹಾಗೂ ಸಪ್ತಸಾಗರದಾಚೆ ಎಲ್ಲೋ ಎಂಬ ಚಿತ್ರಗಳ ಕೆಲಸ ನಡೆಯುತ್ತಿದೆ.