Friday, July 31, 2026

BDA Apartments

Home Crime ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪ್ಲೆಕಾರ್ಡ್ ಪ್ರದರ್ಶನ ವಿಚಾರ: ಘಟನೆ ಬಗ್ಗೆ ವರದಿ ಕೇಳಿದ ರಾಜ್ಯಪಾಲರು‌…

ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪ್ಲೆಕಾರ್ಡ್ ಪ್ರದರ್ಶನ ವಿಚಾರ: ಘಟನೆ ಬಗ್ಗೆ ವರದಿ ಕೇಳಿದ ರಾಜ್ಯಪಾಲರು‌…

ಮೈಸೂರು,ಜ,9,2020(www.justkannada.in): ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪ್ಲೆಕಾರ್ಡ್ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಘಟನೆ ಬಗ್ಗೆ ಮೈಸೂರು ವಿವಿಯಿಂದ ರಾಜ್ಯಪಾಲ ವಜುಭಾಯಿ ವಾಲಾ ಅವರು ವರದಿ ಕೇಳಿದ್ದಾರೆ.

ನಿನ್ನೆ  ಮೈಸೂರು ವಿವಿ ಆವರಣದಲ್ಲಿ ಪ್ರತಿಭಟನೆ ವೇಳೆ ಕಾಶ್ಮೀರ ಪ್ಲೆಕಾರ್ಡ್ ಪ್ರದರ್ಶನ ಮಾಡಿದ್ದು ವಿವಾದಕ್ಕೀಡಾಗಿದೆ. ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಘಟನೆ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದಿಂದ  ರಾಜ್ಯಪಾಲರು ವರದಿ ಕೇಳಿದ್ದು ಸಂಜೆ ವೇಳೆ ವರದಿ ನೀಡುವಂತೆ ಸೂಚಿಸಿದ್ದಾರೆ.  ರಾಜ್ಯಪಾಲರಿಗೆ  ವರದಿ ನೀಡಲು ಮೈಸೂರು ವಿವಿ ರಿಜಿಸ್ಟರ್ ಆರ್.ಶಿವಪ್ಪ ಸಿದ್ಧತೆ ನಡೆಸಿದ್ದಾರೆ.

ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮಿರ ಪ್ಲೆಕಾರ್ಡ್ ಪ್ರದರ್ಶನ  ಪ್ರಕರಣ ಸಂಬಂಧ ಮೈಸೂರು ವಿವಿಯಿಂದ ಭದ್ರತಾ ಸಿಬ್ಬಂದಿಗೂ ಮೈಸೂರು ವಿವಿ ರಿಜಿಸ್ಟ್ರಾರ್ ಆರ್.ಶಿವಪ್ಪ ಕಾರಣಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಪ್ರತಿಭಟನೆ ವೇಳೆ ಭದ್ರತಾ ಲೋಪ ಆಗಿರುವ ಬಗ್ಗೆ ನೋಟಿಸ್ ಜಾರಿ ಮಾಡಿದ್ದಾರೆ.

Key words: Free Kashmir -Playcard Exhibition- Mysore university-governor – report – incident.