ಫ್ರಿ ಕಾಶ್ಮೀರ್ ಪ್ಲೆ ಕಾರ್ಡ್ ಪ್ರದರ್ಶನ ವಿಚಾರ: ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲರ ಮೇಲೂ ಎಫ್ ಐಆರ್ ದಾಖಲಿಸಿ- ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಈ.ಸಿ ನಿಂಗರಾಜಗೌಡ ಆಗ್ರಹ…

ಮೈಸೂರು,ಜ,10,2020(www.justkannada.in): ಮೈಸೂರು ವಿಶ್ವ ವಿದ್ಯಾನಿಲಯ ಆವರಣದಲ್ಲಿ ಪ್ರತಿಭಟನೆ ವೇಳೆ  ಫ್ರಿ ಕಾಶ್ಮೀರ ಪ್ಲೆಕಾರ್ಡ್  ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟದಲ್ಲಿ ಭಾಗಿಯಾಗಿದ್ದ ಎಲ್ಲರ ಮೇಲೂ ಎಫ್ ಐಆರ್ ದಾಖಲಿಸಬೇಕು ಎಂದು ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಇಸಿ ನಿಂಗರಾಜಗೌಡ ಆಗ್ರಹಿಸಿದ್ದಾರೆ.

ಈ ಬಗ್ಗೆ ‘ಜಸ್ಟ್ ಕನ್ನಡ ಡಾಟ್ ಇನ್’ ಜತೆ ಮಾತನಾಡಿದ  ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಇಸಿ ನಿಂಗರಾಜಗೌಡ ಅವರು, ಪ್ರಕರಣಕ್ಕೆ ಸಂಬಂಧ ಯುವತಿ ನಳಿನಿ ಬಾಲಕೃಷ್ಣ  ಅದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇವರಿಗೂ, ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೂ ಸಂಬಂಧ ಇಲ್ಲ ಎಂದು ನಳಿನಿ ಬಾಲಕೃಷ್ಣ  ಬಳಿ  ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಉಳಿದವರನ್ನ ಬಚಾವ್ ಮಾಡುವ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.

ಈ ನಡುವೆ ಹೋರಾಟದಲ್ಲಿ ಬಿವಿಎಸ್, ಸಂಶೋಧನಾ ವಿದ್ಯಾರ್ಥಿಗಳ ಸಂಘ, ಎಸ್ ಡಿಪಿಐ ಮುಸ್ಲೀಂ ವಿಂಗ್ ಭಾಗಿಯಾಗಿದೆ.  ಹೊರಗಿನ ಎಲ್ಲವರೂ ಭಾಗಿಯಾಗಿದ್ದಾರೆ. ಪ್ರತಿಭಟನಾ ಮೆರವಣಿಗೆ ವೇಳೆ ಪ್ರಚೋಧನಾಕಾರಿ ಘೋಷಣೆಗಳನ್ನ ಕೂಗಿದ್ದಾರೆ.  ಆದರೆ ಈ ಪ್ರಕರಣದಲ್ಲಿ ನಳಿನಿ ಬಾಲಕೃಷ್ಣ ಓರ್ವ ವಿದ್ಯಾರ್ಥಿನಿಯನ್ನ ಭಾಗಿಯನ್ನಾಗಿ ಮಾಡಿಲಾಗಿದೆ. ಹೀಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಎಲ್ಲರ ಮೇಲೂ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕಮಿಷನರ್ ಕಡೆಯಿಂದ ಕ್ರಮ ಕೈಗೊಳ್ಳಬೇಕು.  ವೈಯಕ್ತಿಕ ಎಫ್ ಐಆರ್ ದಾಖಲಿಸಬೇಕು. ಜತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವವರನ್ನ ಹಾಸ್ಟೆಲ್ ನಿಂದ ಹೊರಗಡೆ ಹಾಕಿ ಪ್ರವೇಶಾತಿಯನ್ನ ರದ್ದುಪಡಿಸಬೇಕುಎಂದು ಇಸಿ ನಿಂಗರಾಜ್ ಗೌಡ ಒತ್ತಾಯಿಸಿದ್ದಾರೆ.

Key words: Free Kashmir -Play Card- mysore university- FIR-involved – protest-EC Nigarajagowda