ವಿದ್ಯಾಗಮ ಆರಂಭ ಶಾಲೆ ಆರಂಭದ ಮುನ್ಸೂಚನೆ ಅಲ್ಲ- ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ….

ಚಾಮರಾಜನಗರ,ಡಿಸೆಂಬರ್,16,2020(www.justkannada.in):  ವಿದ್ಯಾಗಮ ಯೋಜನೆ ಆರಂಭವು ಶಾಲೆ ಆರಂಭದ ಮುನ್ಸೂಚನೆ ಅಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.I didn't knew CM BSY will think so cheaply - KPCC President D.K. Shivakumar

ಶಿಕ್ಷಕರು ಮತ್ತು ಮಕ್ಕಳಿಗೆ ಕೊರೋನಾ ಹರಡುತ್ತಿದ್ದ ಹಿನ್ನೆಲೆ ಅಕ್ಟೋಬರ್ 10 ರಂದು ಸ್ಥಗಿತಗೊಳಿಸಲಾಗಿದ್ದ ವಿದ್ಯಾಗಮ ಯೋಜನೆಯನ್ನ ಮತ್ತೆ ಪ್ರಾರಂಭಿಸಲಾಗಿದೆ. ಈ ಕುರಿತು ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ ಕೊರೋನಾ ಸೋಂಕಿತ ಪ್ರಮಾಣ ಕಡಿಮೆ ಇದೆ.  ಪಾಸಿಟಿವ್ ರೇಟ್ ಶೇ.1 ಕ್ಕಿಂತ ಕಡಿಮೆ ಇದೆ. ಮಕ್ಕಳು ಶಿಕ್ಷಣದಿಂದ ವಂಚಿತರಾದರೇ ಬಾಲಕಾರ್ಮಿಕರಾಗುವ ಸಾಧ್ಯತೆ ಇದೆ. ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹಗಳಾಗುವ ಸಾಧ್ಯತೆ ಇದೆ.vidyagama-school-not-start-education-minister-suresh-kumar-clarified

ಹೀಗಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅದ್ದರಿಂದ ವಿದ್ಯಾಗಮ ಯೋಜನೆ ಮತ್ತೆ ಪ್ರಾರಂಭಿಸಲಾಗಿದೆ. ಆದರೆ ವಿದ್ಯಾಗಮ ಯೋಜನೆ ಆರಂಭವು ಶಾಲೆ ಆರಂಭದ ಮುನ್ಸೂಚನೆ ಅಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

Key words: vidyagama-School – not-start- Education Minister -Suresh Kumar -clarified.