ಸಿಸಿಬಿ ಪೊಲೀಸರ ಕಾರ್ಯಾಚರಣೆ: ನಾಲ್ಕು ಜನ ಕುಖ್ಯಾತ ಸರಗಳ್ಳರ ಬಂಧನ.

ಮೈಸೂರು,ಜುಲೈ,27,2021(www.justkannada.in): ಮೈಸೂರಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 4 ಜನ ಕುಖ್ಯಾತ ಸರಗಳ್ಳರನ್ನ ಬಂಧಿಸಿದ್ದಾರೆ.jk

ಶಾಂತಿನಗರದ ಅಯಾಜ್ ಖಾನ್,  ತೌಸಿಫ್ ಪಾಷ, ರಾಜೀವ್‌ನಗರದ ತೌಸಿಫ್ ಬೇಗ್, ಶೋಹೆಬ್ ಪಾಷ ಬಂಧಿತರು.  ಬಂಧಿತರಿಂದ ರೂ.5,80,000 ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.

ಮೈಸೂರು ನಗರದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನಲೆ.  ಸರಗಳ್ಳತನ ಪ್ರಕರಣಗಳನ್ನು ಬೇಧಿಸಲು ಮೈಸೂರು ನಗರದ ಪೊಲೀಸ್ ಆಯುಕ್ತರು, ಸಿ.ಸಿ.ಬಿ.ಘಟಕದ  ಅಧಿಕಾರಿ, ಸಿಬ್ಬಂದಿಗಳಿರುವ ವಿಶೇಷ ತಂಡವನ್ನ ರಚಿಸಲಾಗಿತ್ತು. ರಾಜೀವನಗರದ ಶಿವಣ್ಣ ವೃತ್ತದ ಬಳಿ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದಾಗ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆ ಮಾಡಲಾಗಿ ಆರೋಪಿಗಳು ಮೈಸೂರು ನಗರದ

ನಜರ್‍ಬಾದ್, ನರಸಿಂಹರಾಜ, ಕೃಷ್ಣರಾಜ, ಮಂಡಿ ಠಾಣೆ, ಕುವೆಂಪುನಗರ ಹಾಗೂ ವಿಜಯನಗರ ಪೊಲೀಸ್  ಠಾಣೆಗಳ ವ್ಯಾಪ್ತಿಯಲ್ಲಿ ತಲಾ 01 ಒಂದೊಂದು ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದರಿಂದ ಒಟ್ಟು 06 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ ಹಾಗೂ 1 ಮತ್ತು 2ನೇ ಆರೋಪಿಗಳ ವಶದಲ್ಲಿದ್ದ

ಒಂದು ಮಹೇಂದ್ರ ಸೆಂಚೂರಿಯಾ ದ್ವಿಚಕ್ರ ವಾಹನವನ್ನು ಮೈಸೂರು ನಗರದ ಉದಯಗಿರಿ ಠಾಣಾ ಸರಹದ್ದಿನಲ್ಲಿ ಕಳವು ಮಾಡಿ ಸರಗಳ್ಳತನ ಮಾಡಲು ಉಪಯೋಗಿಸುತ್ತಿದ್ದುದ್ದಾಗಿ ವಿಚಾರಣೆ ವೇಳೆಯಲ್ಲಿ ಆರೋಪಿಗಳು ತಿಳಿಸಿದ್ದಾರೆ. ಆರೋಪಿಗಳು ಮೈಸೂರು ನಗರದಲ್ಲಿ ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆಂಬ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿದೆ.

ಡಿ.ಸಿ.ಪಿ. ಗೀತಪ್ರಸನ್ನ ಮಾರ್ಗದರ್ಶನದಲ್ಲಿ, ಸಿಸಿಬಿ  ಎಸಿಪಿ, ಸಿ.ಕೆ.ಅಶ್ವತ್ಥನಾರಾಯಣ ನೇತೃತ್ವದಲ್ಲಿ, ಸಿ.ಸಿ.ಬಿ. ಘಟಕದ ಪೊಲೀಸ್ ಇನ್ಸ್‍ಪೆಕ್ಟರ್ ಆರ್. ಜಗದೀಶ್ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯಾಚರಣೆ  ಮಾಡಿದ್ದಾರೆ.

Key words: Operation – CCB –police-Detention – four notorious –thief-mysore