ಸರ್ಕಾರಿ ನೌಕರಿ, ಗುತ್ತಿಗೆ ಕೊಡಿಸುವುದಾಗಿ ವಂಚನೆ: ‘ಕೈ’ ಶಾಸಕನ ಮಾಜಿ ಆಪ್ತಸಹಾಯಕ ಬಂಧನ.

ಕಲ್ಬರ್ಗಿ,ಮೇ,23,2024 (www.justkannada.in): ಸರ್ಕಾರಿ ನೌಕರಿ, ಕಾಮಗಾರಿ ಗುತ್ತಿಗೆ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿದ ಆರೋಪದ ಮೇಲೆ ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಅವರ ಮಾಜಿ ಆಪ್ತ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ.

ಪರಶುರಾಮ್ ಬಂಧಿತ ಆರೋಪಿ. ಬೀದರ್ ಮೂಲದ ಕಿರಣ್ ಕುಮಾರ್ ಎಂಬುವವರಿಗೆ ಸರ್ಕಾರಿ ನೌಕರಿ, ಗುತ್ತಿಗೆ ಕೊಡಿಸುವುದಾಗಿ 14.90 ಲಕ್ಷ ರೂ ವಂಚನೆ ಮಾಡಿದ್ದನು ಎನ್ನಲಾಗಿದೆ. ಈ ಬಗ್ಗೆ ಕಿರಣ್ ದೂರು ನೀಡಿದ್ದರು. ದೂರಿನ ಮೇರೆಗೆ ಪರಶುರಾಮ್ ನನ್ನು ಬಂಧಿಸಲಾಗಿದೆ.

ಆರೋಪಿ ಅರೆಸ್ಟ್  ಆಗುತ್ತಿದ್ದಂತೆ ಮತ್ತಷ್ಟು ವಂಚನೆ ಮಾಡಿರುವುದು ಬಯಲಿಗೆ ಬಂದಿದೆ.  39 ಜನರಿಗೆ 1.50 ಕೋಟಿ ರೂ ವಂಚನೆ ಮಾಡಿರುವುದು ಬಹಿರಂಗಗೊಂಡಿದೆ.  ಸಿಕ್ಕಿಬೀಳಬಾರದೆಂದು ಪರಶುರಾಮ್  ತಲೆ ಬೋಳಿಸಿಕೊಂಡಿದ್ದನ್ನು. ಬೆಂಗಳೂರಿನ ಲಾಡ್ಜ್ ವೊಂದರಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

Key words: Fraud – government- job- arrested