Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ದೊಡ್ಡವರ ಹೆಸರು ಪ್ರಸ್ತಾಪಿಸಿ ಯಾವುದೇ ಗೊಂದಲಕ್ಕೀಡಾಗಲ್ಲ- ಸುಮಲತಾ ಅಂಬರೀಶ್ ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ...

ದೊಡ್ಡವರ ಹೆಸರು ಪ್ರಸ್ತಾಪಿಸಿ ಯಾವುದೇ ಗೊಂದಲಕ್ಕೀಡಾಗಲ್ಲ- ಸುಮಲತಾ ಅಂಬರೀಶ್ ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಟಾಂಗ್.

ಬೆಂಗಳೂರು,ಏಪ್ರಿಲ್ ,27,2023(www.justkannada.in):  ಜೆಡಿಎಸ್ ನಾಯಕರ ವಿರುದ್ಧ ಟೀಕಿಸಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಟಾಂಗ್ ನೀಡಿದ್ದಾರೆ.

ದೊಡ್ಡವರ ಹೆಸರು ಪ್ರಸ್ತಾಪಿಸಿ ಯಾವುದೇ ಗೊಂದಲಕ್ಕೀಡಾಗಲ್ಲ. ಯಾರು ಏನು ಹೇಳಿದರು ಎಂಬುದು ನನಗೆ ಸಂಬಂಧವಿಲ್ಲ. ಅಭಿವ್ಯಕ್ತಿ ಸ್ವಾತಂತ್ರವಿದೆ  ಮಾತನಾಡಲಿ ಎಂದು ಹೆಚ್.ಡಿ ದೇವೇಗೌಡರು ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ,  ನಾಳೆಯಿಂದ ಮೇ 8ರವರೆಗೆ‌ 62 ಕಡೆ ತಾತ್ಕಾಲಿಕ ಕಾರ್ಯಕ್ರಮ ನಿಗದಿಯಾಗಿದೆ. ವಾರದಲ್ಲಿ‌ ಒಂದು ದಿನ ಆರೋಗ್ಯದ ಕಾರಣ ವಿಶ್ರಾಂತಿಗೆ ಸೂಚಿಸಿದ್ದಾರೆ. ಬೆಂಗಳೂರಿಗೆ ನನ್ನ ಕೊಡುಗೆ ಸಾಕಷ್ಟು ಇದೆ. ದಾಬಸ್​ಪೇಟೆ, ಹೊಸಕೋಟೆಯಲ್ಲಿ ರಿಂಗ್ ರೋಡ್ ಮಾಡಿದ್ದೇನೆ. 7 ಗ್ರಾ.ಪಂ​​ ಜನರಿಗೆ ಕುಡಿಯುವ ನೀರು, ಸರಿಯಾದ ರಸ್ತೆ‌ ಇರಲಿಲ್ಲ. ಬಿಬಿಎಂಪಿಗೆ ಸೇರಿಸಿ‌ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

Key words: Former Prime Minister -HD Deve Gowda -Tong – Sumalata Ambarish.