ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಕುರಿತು ಸ್ಪಷ್ಟನೆ ನೀಡಿದ ಮಾಜಿ ಸಚಿವ ಸಾರಾ ಮಹೇಶ್.

ಮೈಸೂರು,ಫೆಬ್ರವರಿ,28,2024(www.justkannada.in): ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಾ.ರಾ ಮಹೇಶ್ ಕಣಕ್ಕೆ ಎಂಬ ವಿಚಾರ ಸಂಬಂಧ ಸ್ವತಃ ಪ್ರತಿಕ್ರಿಯಿಸಿರುವ  ಸಾ.ರಾ ಮಹೇಶ್, ಸದ್ಯದ ಪರಿಸ್ಥಿತಿಯಲ್ಲಿ ನಾನು ಆಕಾಂಕ್ಷಿ ಖಂಡಿತ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿಇಂದು ಮಾತನಾಡಿದ ಸಾ.ರಾ ಮಹೇಶ್,  ನನ್ನ ಮಾನಸಿಕ, ಆರೋಗ್ಯ,ಮತ್ತು ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ. ನಾನು ಕಳೆದ 35 ವರ್ಷಗಳಿಂದಲೂ ಬಿಜೆಪಿ ಜೊತೆ ಒಡನಾಟ ಇದೆ. ಆದರೆ ಯಾರನ್ನೂ ಚುನಾವಣೆ ವಿಚಾರವಾಗಿ ಭೇಟಿ ಮಾಡಿಲ್ಲ. ಅದರ ಬಗ್ಗೆ ಚರ್ಚೆ ಆಗಿಲ್ಲ. ಸದ್ಯಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರೇ ಕಣಕ್ಕಿಳಿಯಲಿದ್ದಾರೆ. ನಮ್ಮದು ಒಂದೇ ಗುರಿ ಇನ್ನೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡೋದು. ಸದ್ಯಕ್ಕೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಚರ್ಚೆ ಸತ್ಯಕ್ಕೆ ದೂರ ಎಂದರು.

ನನಗೆ  ಯಾವ ಚುನಾವಣೆಗೂ ಸ್ಪರ್ಧೆ ಮಾಡುವ ಆಸಕ್ತಿ ಇಲ್ಲ. ನಮ್ಮ ನಾಯಕರು ಕುಮಾರಸ್ವಾಮಿ ಅವರು ಇದರ ಬಗ್ಗೆ ಏನು ನಿರ್ಧಾರ ಮಾಡುತ್ತಾರೆ ಗೊತ್ತಿಲ್ಲ. ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದರು.  ಈ ಚುನಾವಣೆ ವಿಚಾರ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವುದು ಊಹಾಪೋಹಗಳಷ್ಟೇ ಎಂದು ಸಾ ರಾ ಮಹೇಶ್ ತಿಳಿಸಿದರು.

Key words: Former minister-Sa.ra Mahesh- clarified – contest – Mysore-Kodagu -Lok Sabha constituency.