Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಆಸ್ಪತ್ರೆಯಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಡಿಸ್ಚಾರ್ಜ್….

ಆಸ್ಪತ್ರೆಯಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಡಿಸ್ಚಾರ್ಜ್….

ಬೆಂಗಳೂರು,ನ,3,2019(www.justkannada.in):  ಅನಾರೋಗ್ಯದಿಂದಾಗಿ ನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಬೆನ್ನುನೋವು ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ನವೆಂಬರ್ 1 ರಂದು ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಡಿ.ಕೆ ಶಿವಕುಮಾರ್ ಗೆ ಡೆಂಘ್ವಿ ಜ್ವರ ಶಂಕೆ ವ್ಯಕ್ತವಾದ ಹಿನ್ನೆಲೆ ರಕ್ತಪರೀಕ್ಷೆ ಮಾಡಲಾಗಿತ್ತು. ಡೆಂಘ್ವಿಜ್ವರ ಇಲ್ಲ ಎಂದು ರಿಪೋರ್ಟ್ ಬಂದಿದ್ದು ಹೀಗಾಗಿ ಇಂದು ಡಿ.ಕೆ ಶಿವಕುಮಾರ್ ಡಿಸ್ಚಾರ್ಜ್ ಆಗಿದ್ದಾರೆ.

ಡಿಸ್ಚಾರ್ಜ್ ಆದ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಸದ್ಯ ಆರೋಗ್ಯವಾಗಿದ್ದೇನೆ. ಸ್ವಲ್ಪ ವಿಶ್ರಾಂತಿಬೇಕು ಎಂದು ತಿಳಿಸಿದರು. ಇನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಡಿಕೆಶಿ ಮನೆಯತ್ತ ತೆರಳಿದ್ದಾರೆ.

Key words: Former minister -DK Sivakumar- discharged- from- hospital