Sunday, August 16, 2026

BDA Apartments

Home Front Page ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಅದ್ಧೂರಿ ಸ್ವಾಗತ…

ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಅದ್ಧೂರಿ ಸ್ವಾಗತ…

ಬೆಂಗಳೂರು,ಅ,26,2019(www.justkannada.in): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.

ದೆಹಲಿಯಿಂದ ಬೆಂಗಳೂರಿಗೆ ವಿಮಾನದ ಮೂಲಕ ಕೆಂಪೇಗೌಡ ಅಂತಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಆಗಮಿಸಿದರು. ಇಂತಹ ಡಿಕೆ ಶಿವಕುಮಾರ್ ಅವರನ್ನು ಏರ್ ಪೋರ್ಟ್ ನಲ್ಲಿ ಕೆಪಿಸಿಸಿ ಮುಖಂಡರು, ಅವರ ಅಪಾರ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಮಾಡಿದರು.

ಏರ್ ಪೋರ್ಟ್ ನಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಡಿ.ಕೆ ಶಿವಕುಮಾರ್ ಮೇಲೆ ಹೂವಿನ ಮಳೆಗರೆದು ಹೆಗಲ ಮೇಲೆ ಹೊತ್ತು ಮೆರೆದರು. ಅಲ್ಲದೆ ಡಿ.ಕೆಶಿ ಡಿಕೆಶಿ ಎಂದು ಘೋಷಣೆಯನ್ನ ಕೂಗುತ್ತಾ ತಮ್ಮ ನಾಯಕ ಬಂದಿದ್ದಕ್ಕೆ ಸಂಭ್ರಮ ವ್ಯಕ್ತಪಡಿಸಿದರು.  ಇನ್ನು ಡಿ.ಕೆ ಶಿವಕುಮಾರ್ ನೋಡಲು ಅಭಿಮಾನಿಗಳ ನೂಕು ನುಗ್ಗಲು ಉಂಟಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ 50 ದಿನಗಳಿಂದ ಜೈಲುವಾಸ ಅನುಭವಿಸಿದ್ದ ಡಿಕೆ ಶಿವಕುಮಾರ್ ಗೆ ದೆಹಲಿಯ ಹೈಕೋರ್ಟ್  ಷರತ್ತು ಬದ್ಧ ಜಾಮೀನು  ಮಂಜೂರು ಮಾಡಿದೆ.

Key words: former Minister- DK Shivakumar – arrived – Bangalore -grand Welcome