Saturday, August 22, 2026

BDA Apartments

Home Front Page ಆತ್ಮಹತ್ಯೆಗೆ ಶರಣಾದ ಅಭಿಮಾನಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಮಾಜಿ ಸಿಎಂ ಸಿದ್ಧರಾಮಯ್ಯ…

ಆತ್ಮಹತ್ಯೆಗೆ ಶರಣಾದ ಅಭಿಮಾನಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಮಾಜಿ ಸಿಎಂ ಸಿದ್ಧರಾಮಯ್ಯ…

ಮಂಡ್ಯ,ಫೆಬ್ರವರಿ,18,2021(www.justkannada.in) ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಅಭಿಮಾನಿ ಅಂತ್ಯಕ್ರಿಯೆಯಲ್ಲಿ  ಪಾಲ್ಗೊಂಡು ಅಭಿಮಾನಿಯ ಆಸೆಯನ್ನ ಮಾಜಿ ಸಿಎಂ ಸಿದ್ದರಾಮಯ್ಯ ಈಡೇರಿಸಿದ್ದಾರೆ.jk

ಮಂಡ್ಯ ತಾಲ್ಲೂಕಿನ ಕೋಡಿದೊಡ್ಡಿ ಗ್ರಾಮದ ಕೃಷ್ಣ(24) ಎಂಬ ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಡೆತ್ ನೋಟ್ ನಲ್ಲಿ ನನ್ನ ಅಂತ್ಯಕ್ರಿಯೆಗೆ ನಟ ಯಶ್, ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಬೇಕು. ಯಾಕೆಂದರೆ ನಾನು ಇವರಿಬ್ಬರ ಅಪ್ಪಟ ಅಭಿಮಾನಿ ಎಂದು ಪತ್ರ ಬರೆದಿದ್ದನು.

ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಕೋಡಿದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿದ್ದು, ಅಭಿಮಾನಿಗೆ ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದರು.

Key words: Former CM –Siddaramaiah- funeral – fan – committed suicide-mandya