Sunday, September 20, 2026

BDA Apartments

ರಾಮಮಂದಿರ ದೇಣಿಗೆ ಸಂಗ್ರಹ ಬಗ್ಗೆ ಅಪಸ್ವರವೆತ್ತಿದ ಹೆಚ್ ಡಿಕೆಗೆ ಶಾಸಕ ಎಸ್.ಎ...
Home Front Page ರಾಮಮಂದಿರ ದೇಣಿಗೆ ಸಂಗ್ರಹ ಬಗ್ಗೆ ಅಪಸ್ವರವೆತ್ತಿದ ಹೆಚ್ ಡಿಕೆಗೆ  ಶಾಸಕ ಎಸ್.ಎ ರಾಮದಾಸ್  ಟಾಂಗ್

ರಾಮಮಂದಿರ ದೇಣಿಗೆ ಸಂಗ್ರಹ ಬಗ್ಗೆ ಅಪಸ್ವರವೆತ್ತಿದ ಹೆಚ್ ಡಿಕೆಗೆ  ಶಾಸಕ ಎಸ್.ಎ ರಾಮದಾಸ್  ಟಾಂಗ್

ಮೈಸೂರು,ಫೆಬ್ರವರಿ,18,2021(www.justkannada.in): ರಾಮಮಂದಿರ  ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರಕ್ಕೆ ಅಪಸ್ವರವೆತ್ತಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಟ್ವಿಟ್ಟರ್ ನಲ್ಲಿ ಕುಟುಕಿದ್ದಾರೆ.jk

ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಎಸ್.ಎ ರಾಮದಾಸ್, ಕುಮಾರಸ್ವಾಮಿ ಅವರೇ ನೀವು ಅಂತಃಕರಣದಿಂದ ಮಾತನಾಡಿ. ದೇವೇಗೌಡರ ಕುಟುಂಬ ದೇವರಿಗೆ ಭಕ್ತಿ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದೆ. ತಿಂಗಳಲ್ಲಿ ಹೆಚ್ಚಿನ ದಿನ ಪೂಜೆ, ಹೋಮಗಳಲ್ಲೇ ತೊಡಗುತ್ತೀರಿ ಎಂಬುದು ಜನತೆಗೆ ಗೊತ್ತಿದೆ.ramamandir- construction- H D Kumarswamy- MLA- SA Ramadas –Tong

ರಾಮಮಂದಿರ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಹಿಂದೂಗಳು ಮಾತ್ರವಲ್ಲದೇ, ಮುಸಲ್ಮಾನ, ಕ್ರೈಸ್ತರೂ ಸಹ ದೇಣಿಗೆ ನೀಡುತ್ತಿದ್ದಾರೆ. ಮಹಾತ್ಮ ಗಾಂಧೀಜಿ, ನೆಹರು, ಅಂಬೇಡ್ಕರ್ ಸಹ  ಆರ್ ಎಸ್ ಎಸ್ ನ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. ಆರ್ ಎಸ್ ಎಸ್ ಬಗ್ಗೆ ಜನತೆಗೆ ಧೈರ್ಯದ ಭಾವನೆ ಇದೆಯೇ ಹೊರತು ಹೆದರಿಕೆಯ ಭಾವನೆ ಇಲ್ಲ. ಇವನ್ನೆಲ್ಲಾ ತಿಳಿದು ಇನ್ನಾದರೂ ದೇಶವನ್ನು ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

Key words: ramamandir- construction- H D Kumarswamy- MLA- SA Ramadas –Tong