ಜನ ಆಕ್ರೋಶದಲ್ಲಿ ಕಲ್ಲು ಬೀಸೋದು, ಮೊಟ್ಟೆ ಎಸೆಯೋದು ಸಾಮಾನ್ಯ –ಪರಿಷತ್ ಸದಸ್ಯ ಹೆಚ್.ವಿಶ್ವನಾಥ್.

ಮೈಸೂರು,ಆಗಸ್ಟ್,20,2022(www.justkannada.in):  ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಜನ ಆಕ್ರೋಶದಲ್ಲಿ ಕಲ್ಲು ಬೀಸೋದು, ಮೊಟ್ಟೆ ಎಸೆಯೋದು ಸಾಮಾನ್ಯ ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್,  ಜನ ಆಕ್ರೋಶದಲ್ಲಿ ಕಲ್ಲು ಬೀಸೋದು, ಮೊಟ್ಟೆ ಎಸೆಯೋದು ಸಾಮಾನ್ಯ. ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ, ಜನ ತಮ್ಮ ಆಕ್ರೋಶವನ್ನು ಹೀಗೆ ವ್ಯಕ್ತಪಡಿಸೋದು ಸಹಜ. ಇದಕ್ಕೆ ಹತ್ಯೆ ಯತ್ನದ ಸ್ವರೂಪ ನೀಡುವುದು ಸರಿಯಲ್ಲ.

ಗಾಂಧಿಗೂ,  ಸಿದ್ದರಾಮಯ್ಯಗೂ ಎಲ್ಲಿಂದ ಎಲ್ಲಿಗೆ  ಸಂಬಂಧ ಹೇಳಿ. ಈ ರೀತಿಯ ಹೋಲಿಕೆ ಸರಿಯಲ್ಲ ರಾಜಕೀಯ ನಾಯಕರ ಹತ್ಯೆ ಮಾಡುವಂತಹ  ಕೆಟ್ಟ ವಾತಾವರಣ ರಾಜ್ಯದಲ್ಲಿ ಇಲ್ಲ ಎಂದು ಎಂಎಲ್ಸಿ ಎಚ್. ವಿಶ್ವನಾಥ್ ಹೇಳಿದರು.

Key words: Former CM-Siddaramaiah-car-eggs-MLC-H. Vishwanath.