ಅವರಿಗೇನು ಜೀವ ಭಯ ಇಲ್ಲ: ಆ ಮನುಷ್ಯನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ- ಮಾಜಿ ಸ್ಪೀಕರ್ ರಮೇಶ್ ಕುಮಾರ್.

ಮೈಸೂರು,ಆಗಸ್ಟ್,,20,2022(www.justkannada.in):  ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಅವರಿಗೇನು ಜೀವ ಭಯ ಇಲ್ಲ. ಸಿದ್ಧರಾಮಯ್ಯ ಅವರಿಗೆ ಏನು ಮಾಡಲು ಸಾಧ್ಯವಾಗಲ್ಲ. ಆ ಮನುಷ್ಯನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ಧ  ಡಿ.ದೇವರಾಜ್ ಅರಸ್ ರವರ ೧೦೭ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾಜಿ ಸ್ವೀಕರ್ ರಮೇಶ್ ಕುಮಾರ್, ಕೆಪಿಸಿಸಿ  ಕಾರ್ಯಾಧ್ಯಕ್ಷ ಧ್ರುವನಾರಾಣ್ ,ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು.  ಡಿ.ದೇವರಾಜು ಅರಸು ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಗೌರವ ಸಲ್ಲಿಕೆ ಮಾಡಿದರು.farmers-75-thosend-compensation-former-speaker-ramesh-kumar-demands

ನಂತರ ಸಿದ್ದರಾಮಯ್ಯಗೆ ಮೊಟ್ಟೆ ಹೊಡೆದ ವಿಚಾರ ಕುರಿತು ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್,  ನಮಗೆ ಈಗ ಧೈರ್ಯ ಬಂತು. ಯಾರನ್ನ ಕಂಡರೆ ಆರ್ ಎಸ್ ಎಸ್ ಹಾಗೂ ಬಿಜೆಪಿಗೆ ಭಯ ಇದೆ ಎಂದು ಗೊತ್ತಾಯ್ತಲ್ಲ.! ಬಿಜೆಪಿಯವರು ಮೊಟ್ಟೆ ಹೊಡೆಯಲಿಲ್ಲ ಎಂದಿದ್ದರೆ ನಮಗೇನು ಗೊತ್ತಾಗುತ್ತಿತ್ತು. ಈಗ ಯಾರ ಮೇಲೆ ಭಯ ಇದೆ ಎಂದು ಗೊತ್ತಾಯಿತು. ಬಿಜೆಪಿಯವರು  ಮೊಟ್ಟೆ ಬದಲು ಹೂ ಹಾಕಿದ್ದರೆ ಅವರಿಗಿರುವ ಭಯ ನಮಗೆ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿದರು.

Key words: no fear –former CM-Siddaramaiah-car-egg-Former Speaker-Ramesh Kumar.