ಸನಾತನ ಧರ್ಮದವರು ಗೌರಿ ಲಂಕೇಶ್ ರನ್ನ ಕೊಂದವರು-ಆರ್ ಎಸ್ ಎಸ್ ವಿರುದ್ಧ  ಮಾಜಿ ಸಿಎಂ ಸಿದ್ಧರಾಮಯ್ಯ  ಮತ್ತೆ ವಾಗ್ದಾಳಿ.

ತುಮಕೂರು,ಜನವರಿ,6,2023(www.justkannada.in): ಸನಾತನ ಧರ್ಮದವರು ಗೌರಿ ಲಂಕೇಶ್ ರನ್ನ ಕೊಂದವರು. ಸನಾತನ ಧರ್ಮದವರು ಅಂದರೇ ಆರ್ ಎಸ್ ಎಸ್ ನವರು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಆರ್ ಎಸ್ ಎಸ್ ನವರು ಭಯೋತ್ಪಾದನೆ ಮಾಡುವವರು. ಮಹಾತ್ಮ ಗಾಂಧಿ ಕೊಂದವರು ಯಾರು ಇವರ ವಂಶಸ್ಥರೇ.  ಸಾವರ್ಕರ್ ಕೂಡ ಅದೇ ದಾರಿಯಲ್ಲಿ ಇದ್ದರು.  ಮಹಾತ್ಮಾಗಾಂಧಿ ಕೊಂದ ಗೂಡ್ಸೆ ಪೂಜೆ ಮಾಡುತ್ತಾರೆ ಎಂದು ಕಿಡಿಕಾರಿದರು.

ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ. ಮನುಷ್ಯತ್ವ ಇಲ್ಲದವರಿಂದ ಭಯೋತ್ಪಾದನೆ ಮಾಡಲಾಗುತ್ತಿದೆ . ಧ್ವೇಷದ ರಾಜಕಾರಣ ಬಿಟ್ಟು ಬಿಜೆಪಿಗೆ ಇನ್ನೇನು ಬರಲ್ಲ.  ಬಿಜೆಪಿ ಅಂದ್ರೆ ದೇಶ ಒಡೆಯೋರು. ನಾವು ಈ ದೇಶವನ್ನ ಒಗ್ಗೂಡಿಸುವ ಕೆಲಸ ಮಾಡಿದ್ದೀವಿ ಎಂದು ಸಿದ್ಧರಾಮಯ್ಯ ಹರಿಹಾಯ್ದರು.

Key words: Former CM -Siddaramaiah -again – against -RSS