ವಿಧಾನಸೌಧವನ್ನ ದೊಡ್ಡ ಶಾಪಿಂಗ್ ಮಾಲ್ ಮಾಡಿ  ಹುದ್ದೆಗಳನ್ನ ಖರೀದಿಗೆ ಇಟ್ಟಿದ್ದಾರೆ- ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ.

ಕಲ್ಬುರ್ಗಿ,ಜನವರಿ,6,2023(www.justkannada.in):  ಬಿಜೆಪಿಯವರು ವಿಧಾನಸೌಧವನ್ನ ದೊಡ್ಡ ಶಾಪಿಂಗ್ ಮಾಲ್ ಮಾಡಿ  ಪಿಎಸ್ ಐ, ಎಇ ಹುದ್ದೆಗಳನ್ನ ಖರೀದಿಗೆ ಇಟ್ಟಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿಯಿಂದ ಭ್ರಷ್ಟಚಾರ ರಾಜ್ಯ ಅನ್ನೋ ಬಿರುದು ಸಿಕ್ಕಿದೆ. ಬಿಜೆಪಿ ಅಂದರೆ  ಬ್ರೋಕರ್ ಜನತಾ ಪಕ್ಷ. ಬಿಜೆಪಿ ವಿಧಾನಸೌಧವನ್ನ ದೊಡ್ಡ ಶಾಪಿಂಗ್ ಮಾಲ್ ಮಾಡಿದ್ದಾರೆ. ಈ ಶಾಪಿಂಗ್ ಮಾಲ್ ನಲ್ಲಿ ವರ್ಗಾವಣೆ ಪೋಸ್ಟಿಂಗ್  ಕಾಮಗಾರಿ, ಉದ್ಯೋಗ ಖರೀದಿ ಮಾಡಬಹುದು.

ಇಲ್ಲಿ ಉನ್ನತಾಧಿಕಾರಿಗಳು ಶಾಸಕರೇ ಸೇಲ್ಸ್ ಮನ್ . ಮುಖ್ಯಮಂತ್ರಿಗಳು ಹೈಕಮಾಂಡ್ ಗೆ ಮಧ್ಯವರ್ತಿ, ಸಿಎಂಗೆ ಸಚಿವರು ಮಧ್ಯವರ್ತಿ , ಸಚಿವರಿಗೆ ಶಾಸಕರು ಧಿಕಾರಿಗಳೇ ಮಧ್ಯವರ್ತಿ.  ವರ್ಗಾವಣೆ ಸೋಷಿಯಲ್ ವರ್ಕ್ ಅಂತೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

Key words: Vidhana Soudha – big- shopping- mall – Priyank Kharge -government.