1.28 ಕೋಟಿ ರೂ. ಮೌಲ್ಯದ ಖೋಟಾನೋಟು ಪೊಲೀಸರ ವಶಕ್ಕೆ : ಮೂವರ ಬಂಧನ.

ಬೆಂಗಳೂರು,ಜನವರಿ,6,2023(www.justkannada.in):  ಬೆಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಖೋಟಾನೋಟು ಚಲಾವಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಪಿಚ್ಚು, ನಲ್ಲಕಣಿ, ಸುಬ್ರಹ್ಮಣಿಯನ್ ಬಂಧಿತಾ ಆರೋಪಿಗಳು. ಬಂಧಿತರ ಬಳಿ ಇದ್ದ 1 ಕೋಟಿ 28 ಲಕ್ಷ 68 ಸಾವಿರ ರೂ. ಮೌಲ್ಯದ ಖೋಟಾನೋಟನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಧಿತರು ನಕಲಿ ನೋಟು ನೀಡಿ ಅಸಲಿ ನೋಟು ಪಡೆಯಲು ಬಂದಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Key words: Police- seized-1.28 crore Rs.-  fake currency-Bangalore